ಒಂದು ತಿಂಗಳು ಕೊಡಿ, ನಿಮಗೆ ಬಿಗ್ ಅನೌನ್ಸ್ಮೆಂಟ್ ಕೊಡುತ್ತೇನೆ ಎಂದಿದ್ದಾರೆ. ಸ್ಯಾಂಡಲ್ವುಡ್ ನಟಿ ರಾಗಿಣಿ ಅವರು ಸಿನಿಮಾ, ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
2/ 7
ಸಪ್ರೈಸ್ ಪ್ರೆಸ್ಮೀಟ್ ಅಂದ್ರೆ ಮದುವೆ, ಅದ್ಯಾಕೆ ಹಾಗೆ? ಹೆಣ್ಮಕ್ಕಳಿಗೆ ಅಷ್ಟೇನಾ ಜೀವನದಲ್ಲಿ ಎಂದು ಪ್ರಶ್ನಿಸಿದ್ದಾರೆ ನಟಿ ರಾಗಿಣಿ.
3/ 7
ಎಲ್ರೂ ತುಂಬಾ ಖುಷಿಯಲ್ಲಿ ಎಂಜಾಯ್ ಮಾಡ್ತಾ ಮದುವೆಯಾಗಲಿ. ನಾನು ಮದುವೆಗೆ ಹೋಗಿ ಎಂಜಾಯ್ ಮಾಡುತ್ತೇನೆ ಎಂದಿದ್ದಾರೆ ರಾಗಿಣಿ.
4/ 7
ನಾನು ಸದ್ಯ ಕೆಲಸದಲ್ಲಿ ತುಂಬಾ ಖುಷಿಯಾಗಿದ್ದೇನೆ. ಶೂಟಿಂಗ್ ಮಾಡುವುದರಲ್ಲಿ ತುಂಬಾ ಖುಷಿ ಇದೆ. ನಿಮಗೇನು ಖುಷಿ ಕೊಡುತ್ತದೋ ಅದನ್ನು ಮಾಡಬೇಕು ಎಂದಿದ್ದಾರೆ.
5/ 7
ಅವರಿಗೆ ಮದುವೆ ಆಗೋದಕ್ಕೆ ಖುಷಿ ಆಗುತ್ತಿದೆ. ಅದಕ್ಕಾಗಿ ಮದುವೆಯಾಗುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ಲೈಫ್ನಲ್ಲಿ ಒಂದು ಫೇಸ್ ಬರುತ್ತದೆ. ಪ್ರೊಫೆಷನಲ್ ಲೈಫ್ ಸಾಕು, ಈಗ ಮದುವೆಯಾಗಬೇಕು ಅನಿಸುತ್ತದೆ ಎಂದಿದ್ದಾರೆ.
6/ 7
ಸದ್ಯ ನನ್ನ ಪರ್ಸನಲ್ ಲೈಫ್ ಹಾಗೂ ಪ್ರೊಫೆಷನಲ್ ಲೈಫ್ ಕೆಲಸದ ಸುತ್ತಲೇ ಇದೆ. ನಾನು ಉಳಿದವರು ಮದುವೆಯಾಗಿ ಪೋಷಕರಾಗೋದನ್ನು ನೋಡಿದ್ದೇನೆ. ಖುಷಿಯಾಗುತ್ತದೆ ಎಂದಿದ್ದಾರೆ.
7/ 7
ನಟಿ ಸದ್ಯ ಸಿನಿಮಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಫಿಟ್ನೆಸ್ ಕಡೆಗೂ ಗಮನಹರಿಸಿದ್ದಾರೆ. ನಟಿ ಸಾಕಷ್ಟು ಫೋಟೋಶೂಟ್ಗಳನ್ನೂ ಶೇರ್ ಮಾಡುತ್ತಿರುತ್ತಾರೆ.