ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಸದಾ ನಗುತ್ತಿರುವ ರಾಧಿಕಾ ತಮ್ಮ ಸುತ್ತಲಿನವರು ಖುಷಿಯಿಂದ ಇರುವಂತೆ ನೋಡಿಕೊಳ್ತಾರೆ.
2/ 8
ರಾಧಿಕಾ ಪಂಡಿತ್ ಮಕ್ಕಳಾದ ಮೇಲೆ ನಟನೆಯಿಂದ ದೂರ ಉಳಿದಿದ್ದಾರೆ. ತಮ್ಮ ಸಂಸಾರ, ಮಕ್ಕಳನ್ನು ನೋಡಿಕೊಂಡು ಖುಷಿ ಪಡ್ತಾರೆ. ಎಂಜಾಯ್ ಮಾಡ್ತಾರೆ.
3/ 8
ರಾಧಿಕಾ ಪಂಡಿತ್ ಅವರು ಯಾವಾಗಲೂ ಕುಟುಂಬಕ್ಕೆ ತುಂಬಾ ಸಮಯ ಕೊಡ್ತಾರೆ. ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ. ಅದರಲ್ಲೇ ತಮ್ಮ ಸಂತೋಷ ಕಾಣುತ್ತಾರೆ.
4/ 8
ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಆಗಾಗ ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಸಹ ಅವನ್ನು ಮೆಚ್ಚುತ್ತಾರೆ.
5/ 8
ರಾಧಿಕಾ ಪಂಡಿತ್ ಎಲ್ಲಾ ಹಬ್ಬಗಳನ್ನು ತುಂಬಾ ಗ್ರ್ಯಾಂಡ್ ಆಗಿ ಮಾಡ್ತಾರೆ. ಮಕ್ಕಳ ಜೊತೆಗಿನ ಫೋಟೋಗಳನ್ನು ಹಾಕುತ್ತಾರೆ. ತಮ್ಮ ಸಂತೋಷವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಾರೆ.
6/ 8
ಕೆಲ ದಿನಗಳ ಹಿಂದೆ ರಾಧಿಕಾ ಅವರು ತಮ್ಮ ತಂದೆ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದರು. ಪಪ್ಪನ ರಾಜಕುಮಾರಿ, ಪಪ್ಪನ ಪುಟ್ಟು ಹುಡುಗಿ ಎಂದೆಂದಿಗೂ ಎಂದು ಹಾಕಿಕೊಂಡಿದ್ದರು.
7/ 8
ರಾಧಿಕಾ ಪಂಡಿತ್ ಅವರ ಹಾಕಿರುವ ಫೋಟೋಗೆ 1 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೂಪರ್ ಎಂದು ಹಲವು ಜನ ಕಾಮೆಂಟ್ ಹಾಕಿದ್ದಾರೆ.
8/ 8
ರಾಧಿಕಾ ಪಂಡಿತ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಆದಷ್ಟು ಬೇಗ ಸಿನಿಮಾ ಮಾಡಿ ಎಂದು ಕೇಳ್ತಾ ಇದ್ದಾರೆ.