Radhika Pandit: ತಂದೆ ಬರ್ತ್ ಡೇಗೆ ರಾಧಿಕಾ ಪಂಡಿತ್ ವಿಶ್, ಅಪ್ಪನಿಗೆ ಪ್ರೀತಿಯ ರಾಜಕುಮಾರಿ ಕೊಟ್ಟ ಗಿಫ್ಟ್ ಏನು?
ನಟಿ ರಾಧಿಕಾ ಪಂಡಿತ್ ಅವರು ತಮ್ಮ ತಂದೆ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಾಕಿ ವಿಶ್ ಮಾಡಿದ್ದಾರೆ. ರಾಧಿಕಾ ಯಾವಾಗಲೂ ಅಪ್ಪನ ಪುಟ್ಟ ರಾಜಕುಮಾರಿಯಂತೆ. ಹಾಗಾದ್ರೆ ಪುಟ್ಟ ರಾಜಕುಮಾರಿ ತಮ್ಮ ತಂದೆಗೆ ಕೊಟ್ಟ ಗಿಫ್ಟ್ ಏನು?
ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಸದಾ ನಗುತ್ತಿರುವ ರಾಧಿಕಾ ತಮ್ಮ ಸುತ್ತಲಿನವರು ಖುಷಿಯಿಂದ ಇರುವಂತೆ ನೋಡಿಕೊಳ್ತಾರೆ.
2/ 8
ರಾಧಿಕಾ ಪಂಡಿತ್ ಮಕ್ಕಳಾದ ಮೇಲೆ ನಟನೆಯಿಂದ ದೂರ ಉಳಿದಿದ್ದಾರೆ. ತಮ್ಮ ಸಂಸಾರ, ಮಕ್ಕಳನ್ನು ನೋಡಿಕೊಂಡು ಖುಷಿ ಪಡ್ತಾರೆ. ಎಂಜಾಯ್ ಮಾಡ್ತಾರೆ.
3/ 8
ರಾಧಿಕಾ ಅವರು ತಮ್ಮ ತಂದೆ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಪಪ್ಪನ ರಾಜಕುಮಾರಿ, ಪಪ್ಪನ ಪುಟ್ಟು ಹುಡುಗಿ ಎಂದೆಂದಿಗೂ, ಹುಟ್ಟುಹಬ್ಬದ ಶುಭಾಶಯಗಳು ಅಪ್ಪ ಎಂದು ಬರೆದುಕೊಂಡಿದ್ದಾರೆ.
4/ 8
ರಾಧಿಕಾ ಪಂಡಿತ್ ಅವರು ಯಾವಗಲೂ ಕುಟುಂಬಕ್ಕೆ ತುಂಬಾ ಸಮಯ ಕೊಡ್ತಾರೆ. ಅದರಲ್ಲೂ ರಾಧಿಕಾ ಅವರಿಗೆ ಅವರ ಅಪ್ಪ ಅಂದ್ರೆ ತುಂಬಾ ಇಷ್ಟ.
5/ 8
ರಾಧಿಕಾ ಪಂಡಿತ್ ಅವರಿಗೆ ಅವರ ಅಪ್ಪ ಕೃಷ್ಣಪ್ರಸಾದ್ ಪಂಡಿತ್ ಸೂಪರ್ ಹೀರೋ ಅಂತೆ. ಸದಾ ಅಪ್ಪನ ಜೊತೆಗಿರೋ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.
6/ 8
ಕೆಲ ದಿನಗಳ ಹಿಂದೆ ನಟಿ ರಾಧಿಕಾ ಪಂಡಿತ್ ಮಕ್ಕಳೊಂದಿಗೆ ಅಪ್ಪನ ಸ್ಕೂಟರ್ ಜೊತೆ ಫೋಟೋಗೆ ಪೋಸ್ ನೀಡಿದ್ದರು. ಚೆಂದದ ಫೋಟೋವನ್ನು ಹಲವರು ಮೆಚ್ಚಿಕೊಂಡಿದ್ರು.
7/ 8
ನನ್ನ ಅಪ್ಪ ಜಗತ್ತಿನಲ್ಲಿಯೇ ಸೇಫ್ ಡ್ರೈವರ್. ಅವರು ಡ್ರೈವ್ ಮಾಡುವಾಗ ನಾನು ನಿಜಕ್ಕೂ ನಿದ್ರಿಸಬಹುದು. ನನ್ನ ಪೂರ್ತಿ ಜೀವನದಲ್ಲಿ ಶಾಲೆ ಹಾಗೂ ಕಾಲೇಜ್ ಲೈಫ್ನಲ್ಲಿ ಅಪ್ಪ ನನ್ನನ್ನು ಪಿಕಪ್-ಡ್ರಾಪ್ ಮಾಡುತ್ತಿದ್ದರು ಎಂದು ನೆನಪಿಸಿಕೊಂಡಿದ್ದರು.
8/ 8
ಅಪ್ಪನೊಂದಿಗಿನ ರಾಧಿಕಾ ಪಂಡಿತ್ ಅವರ ಹಾಕಿರುವ ಫೋಟೋಗೆ 87 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೂಪರ್ ಎಂದು ಹಲವು ಜನ ಕಾಮೆಂಟ್ ಹಾಕಿದ್ದಾರೆ.