ಸ್ಯಾಂಡಲ್ವುಡ್ನ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಮದುಚವೆಯ ನಂತರ ಚಿತ್ರರಂಗದಿಂದ ದೂರವಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರೀಯರಾಗಿದ್ದಾರೆ. ಅದರಂತೆ ತಮ್ಮ ಇನ್ಸ್ಟಾಗ್ರಾಂನಲ್ಲಿ 500ನೇ ಪೋಸ್ಟ್ ಅನ್ನು ವಿಶೇಷವಾಗಿ ಹಂಚಿಕೊಂಡಿದ್ದಾರೆ. ಕುಟುಂಬದವರೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದು, ತಮ್ಮ 500ನೇ ಪೋಟೋಗಾಗಿ ಇದನ್ನು ಹಂಚಿಕೊಂಡಿದ್ದಕ್ಕಾಗಿ ಅವರು ಬರೆದುಕೊಂಡಿದ್ದಾರೆ.
ಅಂದ್ಹಾಗೆ, ಪುಟಾಣಿ ಮಕ್ಕಳ ಆರೈಕೆಯಲ್ಲೇ ಬ್ಯುಸಿಯಾಗಿರುವ ರಾಧಿಕಾ ಪಂಡಿತ್ ಯಾವ ಚಿತ್ರವನ್ನೂ ಸದ್ಯಕ್ಕೆ ಒಪ್ಪಿಕೊಂಡಿಲ್ಲ. 'ಆದಿಲಕ್ಷ್ಮಿ ಪುರಾಣ' ಚಿತ್ರದ ಬಳಿಕ ಯಾವುದೇ ಚಿತ್ರಕ್ಕೆ ರಾಧಿಕಾ ಪಂಡಿತ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಅವರು ಮತ್ತೆ ಸ್ಯಾಂಡಲ್ವುಡ್ಗೆ ರೀ ಎಂಟ್ರಿ ನೀಡಬೇಕು ಎಂದು ಅಭಿಮಾನಿಗಳು ಆಗ್ಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳುತ್ತಿರುತ್ತಾರೆ.
2016ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರನ್ನ ರಾಧಿಕಾ ಪಂಡಿತ್ ಮದುವೆಯಾದರು. ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸ್ಯಾಂಡಲ್ವುಡ್ಗೆ ಒಟ್ಟಿಗೆ ಕಾಲಿಟ್ಟ ಈ ಜೋಡಿ, ಒಟ್ಟಿಗೆ ಕೆಲ ಚಿತ್ರಗಳನ್ನು ಮಾಡಿದ್ದಾರೆ. ಮೊಗ್ಗಿನ ಮನಸ್ಸು ಇಬ್ಬರ ಮೊದಲ ಚಿತ್ರವಾಗಿದೆ. ಬಳಿಕ ರಾಮಾಚಾರಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ಇಬ್ಬರು ಅಭಿನಯಿಸಿದ್ದಾರೆ.