ಪ್ರಿಯಾಂಕಾ ತಿಮ್ಮೇಶ್ 2015ರಲ್ಲಿ ಗಣಪ ಚಿತ್ರದ ಮೂಲಕ ಕನ್ನಡ ಚಿತ್ರಕ್ಕೆ ಕಾಲಿಟ್ಟರು. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾದಲ್ಲೂ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಅಭಿಮಾನಿಗಳನ್ನು ಸೆಳೆದಿದ್ದಾರೆ. ಕನ್ನಡದಲ್ಲಿ `ಪಟಾಕಿ', `ಭೀಮಸೇನ ನಳಮಹಾರಾಜ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಎಲ್ಲಾ ಚಿತ್ರಗಳಲ್ಲೂ ಪ್ರಿಯಾಂಕಾ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.