ಮುಂಗಾರುಮಳೆ ಸಿನಿಮಾ ಎಷ್ಟು ಹಿಟ್ ಆಗಿತ್ತು ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ, ಆ ಸಿನಿಮಾ ಮೂಲಕ ಪೂಜಾ ಗಾಂಧಿ ಖ್ಯಾತಿ ಹೊಂದಿದರು.
2/ 8
ಮುಂಗಾರುಮಳೆ ಸಿನಿಮಾ ಮಾಡುವಾಗ ಪೂಜಾ ಗಾಂಧಿಗೆ ಕನ್ನಡ ಬರುತ್ತಿರಲಿಲ್ಲ. ಏಕೆಂದರೆ ಅವರು ಬೆಂಗಾಲಿ ಚೆಲುವೆ. ಆದ್ರೆ ಈಗ ತುಂಬಾ ಚೆಂದವಾಗಿ ಕನ್ನಡ ಬರೆಯುತ್ತಿದ್ದಾರೆ.
3/ 8
ಕುವೆಂಪು ವಿಮಾನ ನಿಲ್ದಾಣದ ಉದ್ಘಾಟನೆ ಸಂದರ್ಭದಲ್ಲಿ ಶಿವಮೊಗ್ಗ ಕನ್ನಡಿಗರೆಲ್ಲರಿಗೂ ಪೂಜಾ ಗಾಂಧಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅವರ ಪೋಸ್ಟ್ ಎಲ್ಲೆಡೆ ಹರಿದಾಡ್ತಾ ಇದೆ.
4/ 8
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದು ಬರಹ ಬರೆದುಕೊಂಡು, ಬಾರಿಸು ಕನ್ನಡ ಡಿಂಡಿಮವ ಹಾಡನ್ನು ಪೂಜಾ ಅವರೇ ಬರೆದಿದ್ದಾರೆ. ಅವರ ಅಕ್ಷರಗಳು ತುಂಬಾ ಮುದ್ದಾಗಿವೆ.
5/ 8
ಅಷ್ಟೇ ಅಲ್ಲದೇ ಪೂಜಾ ಗಾಂಧಿ ಅವರು ಕೆಲ ದಿನಗಳಿಂದ ಕನ್ನಡ ಹಾಡುಗಳು, ವಚನಗಳನ್ನು ಬರೆಯುತ್ತಿದ್ದಾರೆ. ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತಾ ಇರುತ್ತಾರೆ.
6/ 8
ಪೂಜಾ ಗಾಂಧಿ ಅವರ ಕನ್ನಡ ಪ್ರೇಮಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲೇ ಇದ್ದು ಕನ್ನಡ ಮರೆಯುವವರ ಮಧ್ಯೆ ನೀವು ವಿಭಿನ್ನವಾಗಿ ಕಾಣ್ತೀರಿ ಎಂದು ಹೇಳಿದ್ದಾರೆ.
7/ 8
ಪೂಜಾ ಗಾಂಧಿಯವರು ಅದ್ಭುತವಾದ ನಟನೆ ಮೂಲಕ ಕನ್ನಡಿಗರಿಗೆ ಇಷ್ಟವಾಗಿದ್ದಾರೆ.ಪೂಜಾ ಗಾಂಧಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ಸಿನಿಮಾ ದಂಡುಪಾಳ್ಯ. ಈ ಸಿನಿಮಾದಲ್ಲಿ ಅತ್ಯುತ್ತಮ ಕನ್ನಡ ನಟಿಗಾಗಿ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿದೆ.
8/ 8
ಮುಂಗಾರು ಮಳೆ ಸಿನಿಮಾ ಬಳಿಕ ಪೂಜಾಗಾಂಧಿ 'ಮಿಲನ', ತಾಜ್‍ಮಹಲ್, ಬುದ್ಧಿವಂತ, ಕೃಷ್ಣ, ಹಲವು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ.
First published:
18
Pooja Gandhi: 'ಮುಂಗಾರು ಮಳೆ' ಪೂಜಾ ಗಾಂಧಿ ಹ್ಯಾಂಡ್ ರೈಟಿಂಗ್ ವೈರಲ್, ಕನ್ನಡ ಪ್ರೇಮಕ್ಕೆ ಜೈ ಎಂದ ಫ್ಯಾನ್ಸ್