ಮೇಘನಾ ರಾಜ್ರವರು 1990ರ ಮೇ 3ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಹಿರಿಯ ನಟ ಸುಂದರ್ ರಾಜ್ ಹಾಗೂ ತಾಯಿ ಹಿರಿಯ ನಟಿ ಪ್ರಮೀಳಾ ಜೋಷಾಯ್. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಪೂರ್ಣಗೊಳಿಸಿ, ಬೆಂಗಳೂರಿನ ಕ್ರೈಸ್ಟ್ ವಿವಿಯಲ್ಲಿ ಮನೋವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಮೇಘನಾ ರಂಗಭೂಮಿ ಕಲಾವಿದೆಯಾಗಿ, ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಜೋಕುಮಾರಸ್ವಾಮಿ ಎಂಬ ನಾಟಕದಲ್ಲಿ ತಂದೆ ಸುಂದರ್ ರಾಜ್ರವರೊಂದಿಗೆ ನಟಿಸಿದ್ದರು. (ಕೃಪೆ: Instagram)
ಮದುವೆ ಬಳಿಕವೂ ಮೇಘನಾ ರಾಜ್ ಸಿನಿಮಾದಲ್ಲಿ ಅಭಿನಯಿಸುವುದನ್ನು ಮುಂದುವರೆಸಿದ್ದರು. ಮೇಘನಾ ಅವರ ಅಧಿಕೃತ ಫೇಸ್‌ಬುಕ್ ಪುಟವು 2.5 ದಶಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಕೇರಳದ ಪ್ರತಿಷ್ಠಿತ ಕೊಚ್ಚಿ ಟೈಮ್ಸ್ 'ಅತ್ಯಂತ ಅಪೇಕ್ಷಣೀಯ ಮಹಿಳೆ 2015' ಸಮೀಕ್ಷೆಯಲ್ಲಿ ಅವರು ನಂ .19ನೇ ಸ್ಥಾನ ಪಡೆದರು. ಬೆಂಗಳೂರು ಟೈಮ್ಸ್ನ 'ಅತ್ಯಂತ ಅಪೇಕ್ಷಣೀಯ ಮಹಿಳೆ 2015'ರ ಸಮೀಕ್ಷೆಯಲ್ಲಿ ಮೇಘನಾ ರಾಜ್ 10ನೇ ಸ್ಥಾನದಲ್ಲಿದ್ದಾರೆ. (ಕೃಪೆ: Instagram)
ಮೇಘನಾ ಹಾಗೂ ಚಿರಂಜೀವಿ ಜೋಡಿ ಕೂಡ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿತ್ತು. ಮೇಘನಾ ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗು ಸಿನಿಮಾದಲ್ಲಿ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಇವರಿದೆ 2021ರಲ್ಲಿ ಬ್ಯೂಟಿಫುಲ್ ಚಲನಚಿತ್ರದ ನಟನೆಗೆ ಕೊಚ್ಚಿ ಟೈಮ್ಸ್ ಚಲನಚಿತ್ರ ಪ್ರಶಸ್ತಿ, 2011ರ ಕನ್ನಡದ ಪುಂಡಾ ಚಲನಚಿತ್ರದ ನಟನೆಗೆ ಸುವರ್ಣಾ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ, 2012ರಲ್ಲಿ ದಕ್ಷಿಣ ಭಾರತ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಬ್ಯೂಟಿಫುಲ್ ಚಲನಚಿತ್ರದ ನಟನೆಗೆ ಅತ್ಯುತಮ ಪೋಷಕ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದರು (ಕೃಪೆ: Instagram)
ಸದ್ಯ ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಡಾನ್ಯ್ ಶೋ ಡಾನ್ಸಿಂಗ್ ಚಾಂಪಿಯನ್ನಲ್ಲಿ ಮೇಘನಾ ರಾಜ್ ಬ್ಯುಸಿಯಾಗಿದ್ದಾರೆ. ಮೊದಲ ಶೋಗೆ ಅತಿಥಿ ಜಡ್ಜ್ ಆಗಿ ಬಂದ ಮೇಘನಾರನ್ನು ಖಾಯಂ ಜಡ್ಜ್ ಆಗಿ ಉಳಿಸಿಕೊಳ್ಳಬೇಕು ಅಂತ ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಇದೀಗ ಮೇಘನಾ ಡಾನ್ಸಿಂಗ್ ಚಾಂಪಿಯನ್ನ ಮೂವರು ಜಡ್ಜ್ಗಳಲ್ಲಿ ಒಬ್ಬರಾಗಿದ್ದಾರೆ. (ಕೃಪೆ: Instagram)