ಸ್ಯಾಂಡಲ್‍ವುಡ್ ನಟಿ ಮಾನ್ವಿತಾ ಕಾಮತ್ ತಾಯಿ ಸುಜಾತಾ ಕಿಡ್ನಿ ವೈಫಲ್ಯದಿಂದ ಏಪ್ರಿಲ್ 15 ರಂದು ನಿಧನ ಹೊಂದಿದ್ದಾರೆ. ತಾಯಿಯನ್ನು ನೆನೆದು ನಟಿ ಭಾವುಕರಾಗಿದ್ದಾರೆ.
2/ 8
ಮಾನ್ವಿತಾ ಕಾಮತ್ ಅವರು ತಮ್ಮ ತಾಯಿಯ ಅಸ್ಥಿಯನ್ನು ನೀರಿನಲ್ಲಿ ಬಿಟ್ಟಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಾಕಿಕೊಂಡಿದ್ದಾರೆ.
3/ 8
ಅಮ್ಮಾ, ನೀನಿಲ್ಲದೆ ಖಾಲಿ ಖಾಲಿ ಅನಿಸುತ್ತಿದೆ. ಪ್ರಪಂಚದ ಇನ್ನೊಂದು ಬದಿಯಲ್ಲಿ ನೀವು ಆರಾಮ ಮತ್ತು ಶಾಂತಿಯನ್ನು ಕಾಣುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಮಾನ್ವಿತಾ ಭಾವುಕರಾಗಿದ್ದಾರೆ.
4/ 8
ಮಾನ್ವಿತಾ ಕಾಮತ್ ತಾಯಿ ಸುಜಾತಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಅವರಿಗೆ ಕಿಡ್ನಿ ಕಸಿ ಮಾಡಿಸಲಾಗಿತ್ತು ಎನ್ನಲಾಗಿದೆ. ಇದಲ್ಲದೆ ಅವರಿಗೆ ಎರಡು ಬಾರಿ ಹೃದಯಾಘಾತ ಆಗಿತ್ತು.
5/ 8
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸುಜಾತಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಒಂದು ತಿಂಗಳಿಂದ ಅವರು ಆಸ್ಪತ್ರೆಯಲ್ಲೇ ಇದ್ದರು. ತಾಯಿಯನ್ನು ಉಳಿಸಿಕೊಳ್ಳಲು ಅವರು ಲಕ್ಷ ಲಕ್ಷ ಖರ್ಚು ಮಾಡಿದ್ದರು. ಆದರೆ ಪ್ರಯತ್ನ ವಿಫಲವಾಗಿತ್ತು.
6/ 8
ಸುಜಾತಾ ಕಾಮತ್ಗೆ ಅನಾರೋಗ್ಯ ಉಂಟಾದಾಗ ಸೋನು ಸೂದ್ ಕಡೆಯಿಂದ ಸಹಾಯ ಸಿಕ್ಕಿತ್ತು. ಈ ಬಗ್ಗೆ ಟ್ವೀಟ್ ಮಾಡಿದ್ದ ಮಾನ್ವಿತಾ ಕಾಮತ್, ಈಗ ತಾನೇ ಸೋನು ಸೂದ್ ಅವರ ಜತೆ ಮಾತನಾಡಿದೆ. ನನ್ನ ತಾಯಿಗೆ ಅವರು ಮಾಡಿದ ಸಹಾಯಕ್ಕೆ ಧನ್ಯವಾದ ಹೇಳಿದೆ. ನೀವು ನಿಜವಾದ ಹೀರೋ ಸರ್. ಎಲ್ಲದಕ್ಕೂ ಧನ್ಯವಾದ ಎಂದು ಹೇಳಿದ್ದರು.
7/ 8
2015ರಲ್ಲಿ ಕೆಂಡಸಂಪಿಗೆ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಮಾನ್ವಿತಾ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಗರು ಸಿನಿಮಾ ಮಾನ್ವಿತಾ ಅವರಿಗೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದುಕೊಟ್ಟಿತ್ತು.
8/ 8
ಕೊನೆಯದಾಗಿ ಮಾನ್ವಿತಾ ಶಿವ 143 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಕನ್ನಡ ಜೊತೆಗೆ ಮಾನ್ವಿತಾ ಮರಾಠಿ ಮತ್ತು ತೆಲುಗು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ನಡುವೆ ತಾಯಿಯನ್ನು ಕಳೆದುಕೊಂಡಿರುವುದು ತುಂಬಾ ದುಃಖದ ವಿಚಾರವಾಗಿದೆ.
First published:
18
Manvita Kamath: ನೀನಿಲ್ಲದ ಜೀವನ ಖಾಲಿ-ಖಾಲಿ, ಅಮ್ಮನನ್ನು ನೆನೆದು ನಟಿ ಮಾನ್ವಿತಾ ಕಾಮತ್ ಭಾವುಕ!