ಕೆಂಡಸಂಪಿಗೆ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಪರಿಚಯವಾದ ನಟಿ ಮಾನ್ವಿತಾ ನೋಡಲು ಕ್ಯೂಟ್ ಆಗಿದ್ದು, ನಟನೆಯಲ್ಲೂ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
2/ 9
ಮಾನ್ವಿತಾ ಕಾಮತ್ ಅವರು ಸೀರೆಯುಟ್ಟು ಟೀಚರ್ ಆಗಿ ಪಾಠ ಮಾಡಿದ್ದಾರೆ. ಕೈನಲ್ಲಿ ಬುಕ್ ಹಿಡಿದು ಮಕ್ಕಳಿಗೆ ಪಾಠ ಮಾಡ್ತಾ ಇದ್ದಾರೆ. ಸೀರೆಯುಟ್ಟು ಮುದ್ದಾಗಿ ಕಾಣ್ತಾ ಇದ್ದಾರೆ.
3/ 9
ಇದು ಮಾನ್ವಿತಾ ಕಾಮತ್ ಅವರ ಅಮ್ಮನ ಸೀರೆಯಂತೆ. ಅಮ್ಮನ ಸೀರೆ ಉಡುವುದೇ ಖುಷಿ. ಅದರಿಂದ ಆಗುವ ಸಂತೋಷವೇ ಬೇರೆ ಎಂದು ಮಾನ್ವಿತಾ ಅವರು ಹೇಳಿದ್ದಾರೆ.
4/ 9
ಅಂದಹಾಗೆ ಈ ರೀತಿ ಟೀಚರ್ ಆಗಿ ಕಾಣಿಸಿಕೊಂಡಿರುವುದು ಏಕೆ ಎಂದು ಗೊತ್ತಿಲ್ಲ. ಸಿನಿಮಾ ಶೂಟಿಂಗ್ ಇರಬಹುದು ಎಂದು ಹಲವರು ಗೆಸ್ ಮಾಡಿದ್ದಾರೆ.
5/ 9
ಶಿವಣ್ಣನ ಟಗರು ಚಿತ್ರದಲ್ಲಿ ಮಾನ್ವಿತಾ ಅವರು ಅದ್ಭುತವಾಗಿ ನಟಿಸಿದ್ದರು. ಅವರ ನಟನೆ ಎಲ್ಲರಿಗೂ ಇಷ್ಟ ಆಗಿತ್ತು. ಅದಕ್ಕೆ ಅವರುನ್ನು ಅಂದಿನಿಂದ ಟಗರು ಪುಟ್ಟಿ ಎಂದು ಕರೆಯಲಾಗುತ್ತೆ.
6/ 9
ಸೂರಿ ಅವರ ಕೆಂಡ ಸಂಪಿಗೆ ಸಿನಿಮಾದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ ಮಾನ್ವಿತಾಗೆ ಸೈಮಾ ಪ್ರಶಸ್ತಿ ಲಭಿಸಿದೆ. ನಂತರ ಕನ್ನಡದ ಹಲವು ಸಿನಿಮಾದಲ್ಲಿ, ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.
7/ 9
ನಟಿ ಮಾನ್ವಿತಾ ಬಹಳ ದಿನಗಳ ಬಳಿಕ ಸಿನಿಮಾ ಒಪ್ಪಿಕೊಂಡಿದ್ದಾರೆ. ಹಾಗೆ ಒಪ್ಪಿಕೊಂಡ ಈ ಚಿತ್ರದಲ್ಲಿ ಮಾನ್ವಿತಾಗೆ ಲವ್ಲಿ ಸ್ಟಾರ್ ಪ್ರೇಮ್ ಜೋಡಿ ಆಗಿರೋದು ವಿಶೇಷ.
8/ 9
ಮಾನ್ವಿತಾ ಕಾಮತ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಮತ್ತೆ ಟಗರು ಪುಟ್ಟಿ ಮೋಡಿ ಮಾಡ್ತಾರಾ ನೋಡಬೇಕು.
9/ 9
ನಟಿಯ ಫೋಟೋಗೆ ಕಮೆಂಟ್ ಮಾಡಿದ ಅವರ ಟೀಚರ್ ಗುಡ್ ಮಾರ್ನಿಂಗ್ ಟೀಚಾ, ನೀನು ನನ್ನ ವಿದ್ಯಾರ್ಥಿಯಾಗಿದ್ದಾಗಿನ ನೆನಪಾಗುತ್ತಿದೆ. ನಾನು ನಿನನ್ ಮೇಲೆ ಚಾಕ್ ಎಸೆದಿದ್ದೆ ಎಂದಿದ್ದಾರೆ.
ಸೂರಿ ಅವರ ಕೆಂಡ ಸಂಪಿಗೆ ಸಿನಿಮಾದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ ಮಾನ್ವಿತಾಗೆ ಸೈಮಾ ಪ್ರಶಸ್ತಿ ಲಭಿಸಿದೆ. ನಂತರ ಕನ್ನಡದ ಹಲವು ಸಿನಿಮಾದಲ್ಲಿ, ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.