ಕನ್ನಡದ ಖ್ಯಾತ ನಟಿ ಲಕ್ಷ್ಮಿ ಅವರ ಪುತ್ರಿ ಐಶ್ವರ್ಯಾ ಭಾಸ್ಕರನ್ ಅವರು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆಯ ನಟಿಯಾಗಿದ್ದವರು. ಸೌತ್ನ ಸ್ಟಾರ್ ನಟರಿಗೆ ಜೋಡಿಯಾಗಿ ನಟಿಸಿದ್ದಾರೆ.
2/ 11
ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾದಲ್ಲಿ ಹಲವಾರು ಸಿನಿಮಾ ಮಾಡಿ ಸೌತ್ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಐಶ್ವರ್ಯಾ ಅವರು ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದಾರೆ.
3/ 11
ಸ್ಟಾರ್ ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿದ್ದಾರೆ. ಇದೇನು ವಿಶೇಷವಲ್ಲ. ಆದರೆ ಐಶ್ವರ್ಯಾ ವಿಚಾರದಲ್ಲಿ ಇದು ರಾಂಗ್ ಆಗಿದೆ.
4/ 11
ಸ್ಟಾರ್ ಲೆಜೆಂಡ್ ನಟಿಯ ಮಗಳು ನೀವು. ಪ್ರೊಡಕ್ಷನ್ ಹೌಸ್ ತೆರೆಯುವುದು ಬಿಟ್ಟು ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದೀರಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
5/ 11
ಇದರ ಬಗ್ಗೆ ಐಶ್ವರ್ಯಾ ಅವರು ದಿಟ್ಟತನದಿಂದ ಪ್ರತಿಕ್ರಿಯಿಸಿದ್ದಾರೆ. ನನ್ನ ಕೆಪಾಸಿಟಿ ಎಷ್ಟಿದೆ ಅಷ್ಟನ್ನು ಮಾಡಬಹುದು. ಸಾಧ್ಯವಾದನ್ನು ಮಾಡಲಾಗುವುದಿಲ್ಲ ಎಂದಿದ್ದಾರೆ.
6/ 11
ದೊಡ್ಡ ನಟಿಯ ಮಗಳು, ದೊಡ್ಡ ಮನೆಯ ಮಗಳು ಎಂದು ಹೆತ್ತರವರಿಗೆ ಹಿಂಸೆ ಕೊಡಬಾರದು. ಇದು ತುಂಬಾ ಅಸಹ್ಯ. ನಮ್ಮ ಕೆಲಸ ನಾವು ಮಾಡಿಕೊಳ್ಳಬೇಕು ಎಂದು ನೇರವಾಗಿ ಹೇಳಿದ್ದಾರೆ ನಟಿ.
7/ 11
ನನ್ನ ತಾಯಿ ರಿಯಲ್ ಸ್ಟಾರ್. ನಾನು ಅಂಥಹ ಲೆಜೆಂಡ್ ಅಲ್ಲ. ನಾನು ನನ್ನ ಜೀವನ ಪೂರ್ತಿ ಕೆಲಸ ಮಾಡುತ್ತೇನೆ. ಯಾರ ಮೇಲೂ ಅವಲಂಬಿತೆಯಾಗಿ ಬದುಕುವುದಿಲ್ಲ. ನನ್ನ ಸಾವಿನ ನಂತರ ಅಂತ್ಯಕ್ರಿಯೆಗೂ ಹಣ ಇಟ್ಟು ಹೋಗುತ್ತೇನೆ ಎಂದಿದ್ದಾರೆ ಐಶ್ವರ್ಯಾ.
8/ 11
18 ವರ್ಷ ಆಗೋ ತನಕ ನನ್ನ ಜವಾಬ್ದಾರಿ ನನ್ನ ತಾಯಿಯದ್ದು. ಅವರು ವಿದ್ಯಾಭ್ಯಾಸ ಕೊಟ್ಟಿದ್ದಾರೆ. ಹಾಗಿರುವಾಗ ಮುಚ್ಕೊಂಡು ನಾವು ನಮ್ಮ ಕೆಲಸ ಮಾಡಬೇಕು ಎಂದಿದ್ದಾರೆ ನಟಿ.
9/ 11
ದೊಡ್ಡೋರಾದ ಮೇಲೆ ಮಕ್ಕಳು ತಂದೆ ತಾಯಿಯ ಬಳಿ ಸಹಾಯ ಕೇಳೋದು, ಹಣ ಕೇಳೋದು ತಪ್ಪು. ಅವರಿಗೆ ಭಾರವಾಗಿರಬಾರದು ಎಂದು ಹೇಳಿದ್ದಾರೆ.
10/ 11
ಐಶ್ವರ್ಯಾ ಅವರು ಒಂದು ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ಅದನ್ನು ಬಿಟ್ಟು ಎಲ್ಲವೂ ಸೌತ್ ಸಿನಿಮಾಗಳು.
11/ 11
ತಾಯಿ ಹಾಗೂ ಅಜ್ಜಿಯೊಂದಿಗೆ ನಟಿ ಐಶ್ವರ್ಯಾ ಭಾಸ್ಕರನ್. ಹಲವು ವರ್ಷಗಳ ಹಿಂದೆ ಮೂರು ತಲೆಮಾರಿನ ಈ ಫೋಟೋ ಮ್ಯಾಗಜಿನ್ ಒಂದರ ಮುಖಪುಟದಲ್ಲಿ ಬಂದಿತ್ತು.
First published:
111
Aishwarya Bhaskaran: ಮುಚ್ಕೊಂಡು ಕೆಲಸ ಮಾಡ್ಬೇಕು, ಲಕ್ಷ್ಮಿ ಪುತ್ರಿ ಐಶ್ವರ್ಯಾ ಹೀಗ್ಯಾಕಂದ್ರು?