Kavya Shastry: ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ ಮಾಡಿದ ನಟಿ ಕಾವ್ಯಾ ಶಾಸ್ತ್ರಿ..!
ಲಾಕ್ಡೌನ್ ಸಮಯದಲ್ಲಿ ಪ್ಲಾಸ್ಮಾ ದಾನ ಮಾಡಿದ್ದ ನಟಿ ಕಾವ್ತಾ ಶಾಸ್ತ್ರಿ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಮೂಲಕ ನೆರವಾಗಿದ್ದರು. ಈಗ ಇದೇ ನಟಿ ಕ್ಯಾನ್ಸರ್ ರೋಗಿಗಳಿಗೆ ತಮ್ಮ ಉದ್ದದ ಕೂದಲನ್ನು ದಾನ ಮಾಡಿದ್ದಾರೆ. (ಚಿತ್ರಗಳು ಕೃಪೆ: ಕಾವ್ಯಾ ಶಾಸ್ತ್ರಿ ಇನ್ಸ್ಟಾಗ್ರಾಂ ಖಾತೆ)
ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ರಂಜಿಸುತ್ತಿರುವ ನಟಿ ಕಾವ್ಯಾ ಶಾಸ್ತ್ರಿ ಲಾಕ್ಡೌನ್ ಸಮಯದಲ್ಲಿ ಸಾಕಷ್ಟು ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
2/ 8
ಕೋವಿಡ್ ಸೋಂಕಿನಿಂದ ಗುಣಮುಖರಾದ ನಂತರ ಪ್ಲಾಸ್ಮಾ ದಾನ ಮಾಡಿದ್ದರು. ನಂತರ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ದಿನಸಿ ವಿತರಿಸುವ ಮೂಲಕ ನೆರವಾಗಿದ್ದರು.
3/ 8
ಈಗ ತಮ್ಮ ಉದ್ದದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡಿದ್ದಾರೆ.
4/ 8
ಹೌದು, ಕಾವ್ಯಾ ತಮ್ಮ ಕೂದಲನ್ನು ದಾನ ಮಾಡಿರುವ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
5/ 8
ಕಾವ್ಯಾ ತಮ್ಮ ಕೂದಲು ದಾನ ಮಾಡಲು ಒಂದು ಬಲವಾದ ಕಾರಣವಿದೆ.
6/ 8
ಕಾವ್ಯಾ ಅವರ ಚಿಕ್ಕಪ್ಪ ಕ್ಯಾನ್ಸರ್ನಿಂದ ಬಳಲಿಯೇ ಇಹಲೋಹ ತ್ಯಜಿಸಿದ್ದಾರಂತೆ.
7/ 8
ಕ್ಯಾನ್ಸರ್ನಿಂದಾಗಿ ಚಿಕ್ಕಪ್ಪ ಅನುಭವಿಸಿದ ನೋವನ್ನು ಕಣ್ಣಾರೆ ನೋಡಿದ್ದೇನೆ. ಅದಕ್ಕೆ ಈಗ ತಮ್ಮ ಕೂದಲನ್ನು ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡುತ್ತಿದ್ದೇನೆ ಎಂದು ನಟಿ ಕಾವ್ಯಾ ಶಾಸ್ತ್ರಿ ಬರೆದುಕೊಂಡಿದ್ದಾರೆ.
8/ 8
ಈ ಹಿಂದೆ ನಟಿ ಶ್ವೇತಾ ಪ್ರದೀಪ್, ಧ್ರುವ ಸರ್ಜಾ, ಕಾರುಣ್ಯಾ ರಾಮ್ ಸೇರಿದಂತೆ ಸಾಕಷ್ಟು ಮಂದಿ ಕ್ಯಾನ್ಸರ್ ರೋಗಿಗಳಿಗೆ ತಮ್ಮ ಕೂದಲು ದಾನ ಮಾಡಿದ್ದಾರೆ.