ಸ್ಯಾಂಡಲ್‍ವುಡ್ ನಟಿ, ವಜ್ರಕಾಯ ಬೆಡಗಿ ಕಾರುಣ್ಯ ರಾಮ್ ಸದ್ಯ ಸುದ್ದಿಯಲ್ಲಿದ್ದಾರೆ. ಅದು ಸಿನಿಮಾ ಅಥವಾ ನಟನೆಯಿಂದ ಅಲ್ಲ. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಮೂಲಕ.
2/ 8
ರಾತ್ರೋರಾತ್ರಿ ತಮ್ಮ ರಾಜರಾಜೇಶ್ವರಿ ನಗರ ಏರಿಯಾದ ರಸ್ತಿ ಗುಂಡಿಗಳನ್ನು ಮುಚ್ಚಿದ್ದಾರೆ. ರಾತ್ರಿ 11 ಗಂಟೆಗೆ ಸ್ನೇಹಿತರ ಜೊತೆ ಸೇರಿ ಗುಂಡಿಗಳನ್ನು ಮುಚ್ಚಿದ್ದಾರೆ.
3/ 8
ಸರ್ಕಾರ ಅಥವಾ ಜನಪ್ರತಿನಿಧಿಗಳನ್ನು ಬೈಯುವ ಬದಲು, ನಾವೇ ನಮ್ಮ ಏರಿಯಾದ ಒಂದೊಂದು ಗುಂಡಿಗಳನ್ನು ಮುಚ್ಚಿದ್ರೆ ಸಾಕು, ಗುಂಡಿಗಳು ಇರುವುದಿಲ್ಲ ಎಂದು ನಟಿ ಕಾರುಣ್ಯ ರಾಮ್ ಹೇಳಿದ್ದಾರೆ.
4/ 8
ಇವರು ಗುಂಡಿಗಳನ್ನು ಮುಚ್ಚುವಾಗ ಓಡಾಡುವ ಜನ ನಿಂತು, ನಟಿ ಅವರು ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ ನಿಮಗೆ ಒಳ್ಳೆಯದಾಗಲಿ ಎಂದಿದ್ದಾರಂತೆ.
5/ 8
ನಟಿ ಗುಂಡಿ ಮುಚ್ಚಲು 2 ಘಟನೆಗಳು ಕಾರಣವಂತೆ. ಕಾರುಣ್ಯ ಅವರು ಸ್ನೇಹಿತರ ಪೋಷಕರು ಗಾಡಿ ಓಡಿಸುವಾಗ ರಸ್ತೆ ಗುಂಡಿಗೆ ಬಿದ್ದು ಆಸ್ಪತ್ರೆ ಸೇರಿದ್ದರಂತೆ. ಅದರಲ್ಲಿ ಒಬ್ಬರು ಮೃತರಾಗಿದ್ದಾರಂತೆ.
6/ 8
ಇನ್ನು, ನಟಿ ಕಾರುಣ್ಯ ರಾಮ್ ಅವರ ಮುಂದೆ ಹುಡುಗಿಯೊಬ್ಬಳು ಗಾಡಿ ಮೇಲಿಂದ ಬಿದ್ದಳಂತೆ. ಜೀವನ ಮುಖ್ಯ. ಅದಕ್ಕೆ ನನಗೆ ಗುಂಡಿ ಮುಚ್ಚಬೇಕು ಎಂದು ಅನ್ನಿಸಿತು ಎಂದು ಹೇಳಿದ್ದಾರೆ.
7/ 8
ಜನರು ಮನಸ್ಸು ಮಾಡಬೇಕು. ಜನ ಮನಸ್ಸು ಮಾಡಿದ್ರೆ ಬೆಂಗಳೂರನ್ನು ಗುಂಡಿ ಮುಕ್ತ ಮಾಡಬಹುದು ಎಂದು ನಟಿ ಕಾರುಣ್ಯ ರಾಮ್ ಹೇಳಿದ್ದಾರೆ.
8/ 8
ನಟಿ ಕಾರುಣ್ಯ ರಾಮ್ ಅವರು ಸಂಸ್ಕಾರ ಟ್ರಸ್ಟ್ ಮೂಲಕ ಹಲವು ಸೇವೆಗಳನ್ನು ಮಾಡ್ತಾ ಇದ್ದಾರೆ. ಕೋವಿಡ್ ಟೈಮ್‍ನಲ್ಲೂ ಹಲವರಿಗೆ ಸಹಾಯ ಮಾಡಿದ್ದಾರೆ.
First published:
18
Actress Karunya Ram: ತಮ್ಮ ಏರಿಯಾ ಗುಂಡಿಗಳನ್ನು ಮುಚ್ಚಿದ ಕಾರುಣ್ಯ ರಾಮ್, ನಟಿ ಕೆಲಸಕ್ಕೆ ಜನರ ಮೆಚ್ಚುಗೆ!