ನಟಿ ಹರಿಪ್ರಿಯಾಗೆ ಸೀರೆಗಳು ಅಂದ್ರೆ ಇಷ್ಟ ಅಂತೆ. ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳೋಕೆ ಹೆಚ್ಚು ಇಷ್ಟ ಪಡ್ತಾರೆ ನಟಿ. ಅದಕ್ಕೆ ಅವರು ಬಳಿ ಹೆಚ್ಚು ಸೀರೆ ಕಲೆಕ್ಷನ್ಸ್ ಇದೆಯಂತೆ.ನಟಿ ಹರಿಪ್ರಿಯಾಗೆ ಸೀರೆಗಳು ಅಂದ್ರೆ ಇಷ್ಟ ಅಂತೆ. ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳೋಕೆ ಹೆಚ್ಚು ಇಷ್ಟ ಪಡ್ತಾರೆ ನಟಿ. ಅದಕ್ಕೆ ಅವರು ಬಳಿ ಹೆಚ್ಚು ಸೀರೆ ಕಲೆಕ್ಷನ್ಸ್ ಇದೆಯಂತೆ. ಹರಿಪ್ರಿಯಾ ಅವರಿಗೆ ನೃತ್ಯದಲ್ಲಿ ತುಂಬಾ ಆಸಕ್ತಿ ಇದ್ದು, ಭರತ ನಾಟ್ಯ ತರಬೇತಿಯನ್ನೂ ಪಡೆದಿದ್ದಾರೆ. ಪಿಯುಸಿ ಆದ ಮೇಲೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಹರಿಪ್ರಿಯಾ ಅವರು 2008ರಲ್ಲಿ ತೆರೆಕಂಡ ಮನಸುಗಳ ಮಾತು ಮಧುರ ಎಂಬ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಇದಾದ ನಂತರ `ಕಳ್ಳರ ಸಂತೆ', ಚೆಲುವೆಯೇ ನಿನ್ನ ನೋಡಲು ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದರು. 2014ರಲ್ಲಿ ತೆರೆಕಂಡ ಉಗ್ರಂ ಸಿನಿಮಾ ಅವರ ವೃತ್ತಿಜೀವನಕ್ಕೆ ತಿರುವು ನೀಡಿತು. ಈ ಚಿತ್ರದ ಬಳಿಕ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು, ಕೆಲವು ತೆಲುಗು, ಮಲಯಾಳಂ, ತುಳು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.