Actress Amulya: ಮಕ್ಕಳ ಜೊತೆ ಅಮೂಲ್ಯ ಸಂಕ್ರಾಂತಿ ಫೋಟೋಶೂಟ್!
ಸ್ಯಾಂಡಲ್ವುಡ್ ನಟಿ ಅಮೂಲ್ಯ ಸಂಕ್ರಾಂತಿಗೆ ಸ್ಪೆಷಲ್ ಫೋಟೋಶೂಟ್ ಮಾಡಿದ್ದಾರೆ. ಪತಿ ಹಾಗೂ ಮಕ್ಕಳೊಂದಿಗೆ ಕ್ಯೂಟ್ ಆಗಿ ಕಾಣಿಸಿದ್ದಾರೆ.
1/ 9
ಸ್ಯಾಂಡಲ್ವುಡ್ ನಟಿ ಅಮೂಲ್ಯ ಅವರು ಭರ್ಜರಿಯಾದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸಂಕ್ರಾಂತಿಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.
2/ 9
ತಮ್ಮ ಇಬ್ಬರು ಗಂಡು ಮಕ್ಕಳ ಜೊತೆಗೆ ಅಮೂಲ್ಯ ಅವರು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಅವರ ಜೊತೆ ಅವರ ಪತಿಯೂ ಇದ್ದರು.
3/ 9
ತೆಂಗಿನ ಮರದ ಬುಡದಲ್ಲಿ ಮಕ್ಕಳನ್ನು ಎತ್ತಿಕೊಂಡು ಕುಳಿತಿದ್ದಾರೆ ಅಮೂಲ್ಯ ಹಾಗೂ ಜಗದೀಶ್. ಅವರ ಪಕ್ಕವೇ ಮುದ್ದಾದ ಒಂದು ಹಸು ಕೂಡಾ ಇತ್ತು.
4/ 9
ಅಮೂಲ್ಯ ಅವರು ಗೋಲ್ಡನ್ ಕಲರ್ ಸಲ್ವಾರ್ ಧರಿಸಿದ್ದರೆ ಜಗದೀಶ್ ಅವರು ಬ್ಲಾಕ್ ಟೀಶರ್ಟ್ ಧರಿಸಿದ್ದರು. ಮಕ್ಕಳಿಬ್ಬರೂ ವೈಟ್ ಡ್ರೆಸ್ನಲ್ಲಿದ್ದರು.
5/ 9
ಅಮೂಲ್ಯ ಅವರು ತುಂಬಾ ಸಿಂಪಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಮೇಕಪ್ ಹಾಗೂ ಡ್ರೆಸ್ ಧರಿಸಿದ್ದರು.
6/ 9
ದಂಪತಿ ಇಬ್ಬರೂ ಮಕ್ಕಳನ್ನು ಎತ್ತಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇಬ್ಬರು ಮಕ್ಕಳಿಗೂ ಮ್ಯಾಚಿಂಗ್ ಡ್ರೆಸ್ ತೊಡಿಸಿದ್ದರು.
7/ 9
ನಟಿಯ ಈ ಫ್ಯಾಮಿಲಿ ಫೋಟೋಗಳಿಗೆ 33 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
8/ 9
78ಕ್ಕೂ ಹೆಚ್ಚು ಜನರು ಫೋಟೊ ನೋಡಿ ಕಮೆಂಟ್ ಮಾಡಿದ್ದಾರೆ. ಎಲ್ಲರೂ ನಟಿಗೆ ಸಂಕ್ರಾಂತಿ ಶುಭಾಶಯ ತಿಳಿಸಿದ್ದಾರೆ.
9/ 9
ಹ್ಯಾಪಿ ಫೆಸ್ಟಿವಲ್ ಅಮ್ಮೂ, ಸೋ ಕ್ಯೂಟ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಫ್ಯಾನ್ಸ್.
First published: