ಸ್ಯಾಂಡಲ್ವುಡ್ ನಟಿ ಅಮೂಲ್ಯ ಜಗದೀಶ್ ಅವರು ಹೊಸ ವರ್ಷ ಬರ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. 2022 ಹೇಗಿತ್ತು ಎಂದು ಹೇಳಿಕೊಂಡಿದ್ದಾರೆ.
2/ 8
2022 ಇದು ಅದ್ಭುತವಾದ ವರ್ಷವಾಗಿತ್ತು. ಈ ವರ್ಷವು ಸಂತೋಷ, ನೋವು, ಒತ್ತಡ, ಆತ್ಮವಿಶ್ವಾಸ, ಭಯ, ಶಕ್ತಿ, ಪ್ರೀತಿಯ ಪರಿಪೂರ್ಣ ಮಿಶ್ರಣವಾಗಿದೆ ಎಂದು ಅಮೂಲ್ಯ ಹೇಳಿಕೊಂಡಿದ್ದಾರೆ.
3/ 8
2022 ತುಂಬಾ ಕಲಿಸಿದೆ.ಈ ಎಲ್ಲಾ ಕಲಿಕೆಗಳೊಂದಿಗೆ 2023 ನನ್ನ ಮುಂದಿನ ಆವೃತ್ತಿಯನ್ನು ಶುರು ಮಾಡುತ್ತೇನೆ ಎಂದು ನಟಿ ಅಮೂಲ್ಯ ಹೇಳಿದ್ದಾರೆ.
4/ 8
ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ತಮ್ಮ 2022ರ ಅನುಭವ ಹಂಚಿಕೊಂಡಿದ್ದಾರೆ. ಮುಂದಿನ ವರ್ಷಕ್ಕೆ ಅದೆಲ್ಲಾ ಪಾಠ ಎಂದಿದ್ದಾರೆ. ಅಮೂಲ್ಯ ಪೋಸ್ಟ್ ಎಲ್ಲೆರೆ ಮೆಚ್ಚುಗೆ ವ್ಯಕ್ತವಾಗಿದೆ.
5/ 8
ಅವಳಿ ಮಕ್ಕಳಾದ್ರೂ ಅದ್ಭುತವಾಗಿ ಕಾಣ್ತಿದ್ದಾರೆ ಈ ಮಮ್ಮಿ ಸೂಪರ್ ಎಂದಿದ್ದಾರೆ ಜನ. ನಿಮ್ಮ ಸೌಂದರ್ಯದ ಗುಟ್ಟೇನು ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
6/ 8
ನಟಿ ಅಮೂಲ್ಯ ತಮ್ಮ ಅವಳಿ ಗಂಡು ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರು ಇಟ್ಟಿದ್ದಾರೆ. ಅ ದಿಂದಲೇ ಹೆಸರಿಟ್ಟಿದ್ದಾರೆ. ತಮ್ಮ ಅಮೂಲ್ಯ ಎಂಬ ಹೆಸರಿನಿಂದ ಅ ತೆಗೆದುಕೊಂಡು ಅ ಯಿಂದ ಹೆಸರಿಟ್ಟಿದ್ದಾರೆ.
7/ 8
ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಅಮೂಲ್ಯ ಅವರು ಸದ್ಯ ಬ್ಯುಸಿ ಇದ್ದಾರೆ. ಮುದ್ದು ಮಕ್ಕಳನ್ನು ಸಾಕುತ್ತಾ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯನ್ನು ಹಂಚಿಕೊಳ್ತಾರೆ.
8/ 8
ಚೆಲುವಿನ ಚಿತ್ತಾರ ಸೇರಿ ಹಲವು ಹಿಟ್ ಸಿನಿಮಾ ಮಾಡಿದ್ದ ಅಮೂಲ್ಯ ಜಗದೀಶ್ ಅವರ ಜೊತೆ ಮದುವೆ ಆದಾಗಿನಿಂದ ಸಿನಿಮಾದಿಂದ ದೂರು ಉಳಿದಿದ್ದಾರೆ. 2023ರಲ್ಲಿಯಾದ್ರೂ ಸಿನಿಮಾ ಮಾಡ್ತಾರಾ ನೋಡಬೇಕು.