ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಅವರು 1994, ಜನವರಿ 13 ರಂದು ಜನಿಸಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಅದಿತಿ ಮಿಂಚಿದ್ದಾರೆ. ತಮ್ಮ ಅಭಿನಯದ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.
2/ 8
ಅದಿತಿ ಪ್ರಭುದೇವ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ದಾವಣಗೆರೆಯಲ್ಲಿ ಜನಿಸಿದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದ್ದಾರೆ.
3/ 8
'ಗುಂಡ್ಯಾನ ಹೆಂಡತಿ' ಎಂಬ ಕಿರುತೆರೆ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಇವರು, ನಾಗಕನ್ನಿಕೆ ಸಿರೀಯಲ್ ನಲ್ಲಿ ಶಿವಾನಿ ಪಾತ್ರ ಮಾಡಿದ್ದರು.
4/ 8
ಅಜಯ್ ರಾವ್ ಅವರ ಧೈರ್ಯಂ ಚಿತ್ರದಿಂದ ಸಿನಿಮಾ ಆರಂಭಿಸಿದರು. ನಂತರ ಸಿಂಗ, ಬ್ರಹ್ಮಚಾರಿ, ಓಲ್ಡ್ ಮಾಂಕ್, ರಂಗನಾಯಕಿ, ಬಜಾರ್, ತೋತಾಪುರಿ, ಕುಸ್ತಿ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
5/ 8
ಕನ್ನಡದ ನಟಿ ಅದಿತಿ ಪ್ರಭುದೇವ ಗೆಳೆಯ ಯಶಸ್ ಪಟ್ಲಾ ಜೊತೆ ನವೆಂಬರ್ 28ರಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ಮದುವೆ ಆಗಿದ್ದಾರೆ.
6/ 8
ನಟಿ ಅದಿಗೆ ಮದುವೆ ಆದ ಮೇಲೆ ಮೊದಲ ಹುಟ್ಟುಹಬ್ಬ ಇದು. ಪತಿ ಯಶಸ್ ಏನ್ ಉಡುಗೊರೆ ಕೊಡ್ತಾರೆ ಎಂದು ಕುತೂಹಲ ಹೆಚ್ಚಾಗಿದೆ.
7/ 8
ನಟಿ ಅದಿತಿ ಪ್ರಭುದೇವ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ತಮ್ಮ ನೆಚ್ಚಿನ ನಟಿಗೆ ಅಭಿಮಾನಿಗಳು ವಿಶ್ ಮಾಡ್ತಾ ಇದ್ದಾರೆ.
8/ 8
ಅದಿತಿ ಪ್ರಭುದೇವ ಅವರು 2022 ರಲ್ಲಿ 8 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷ ಇನ್ನೂ ಹೆಚ್ಚು ಸಿನಿಮಾ ಮಾಡುವ ಗುರಿ ಹೊದಿದ್ದಾರೆ. ಹ್ಯಾಪಿ ಬರ್ತ್ಡೇ ಅದಿತಿ ಅವರೇ.