ಸ್ಯಾಂಡಲ್ವುಟ್ ನಟಿ ಅದಿತಿ ಪ್ರಭುದೇವ ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿ ಆಗಿದ್ದಾರೆ. 2022ರಲ್ಲಿ ಅದಿತಿ ಅವರ 8 ಸಿನಿಮಾಗಳು ರಿಲೀಸ್ ಆಗಿವೆ.
2/ 8
ನಟಿ ಅದಿತಿ ಪ್ರಭುದೇವ ಅವರು ಲೂಸ್ ಮಾದ ಯೋಗಿ ಅವರ ಜೊತೆಗೆ ನಟಿಸಿದ 9ನೇ ದಿಕ್ಕು 2022 ರ ಆರಂಭದಲ್ಲಿ ಬಿಡುಗಡೆ ಆಗಿದೆ. ಜನರಿಗೆ ಸಿನಿಮಾ ಇಷ್ಟ ಆಗಿತ್ತು.
3/ 8
ಶ್ರೀನಿ ಮತ್ತು ಅದಿತಿ ಪ್ರಭುದೇವ್ ಅವರು ನಟಿಸಿದ್ದ ಓಲ್ಡ್ ಮಾಂಕ್ ಚಿತ್ರವು ಫೆಬ್ರವರಿ ತಿಂಗಳಲ್ಲಿ ರಿಲೀಸ್ ಆಗಿತ್ತು. ಈ ಚಿತ್ರವೂ ಸಹ ಪ್ರೇಕ್ಷಕರನ್ನು ಸೆಳೆದಿತ್ತು.
4/ 8
ಗಜಾನನ ಅಂಡ್ ಗ್ಯಾಂಗ್ ಸಿನಿಮಾವೂ ಜೂನ್ ತಿಂಗಳಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಶ್ರೀಮಹಾದೇವ್ ಮತ್ತು ನಟಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ.
5/ 8
ಬಹುನಿರೀಕ್ಷಿತ ತೋತಾಪುರಿ ಚಿತ್ರವು ಸೆಪ್ಟೆಂಬರ್ ನಲ್ಲಿ ರಿಲೀಸ್ ಆಗಿತ್ತು. ನವರಸ ನಾಯಕ ಜಗ್ಗೇಶ್ ಜೊತೆ ನಟಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ಚಿತ್ರ ಜನರಿಗೆ ತುಂಬಾ ಇಷ್ಟ ಆಗಿತ್ತು.
6/ 8
ನಟಿ ಅದಿತಿ ಪ್ರಭುದೇವ ಅಭಿನಯದ ಚಾಂಪಿಯನ್ ಚಿತ್ರವು ಅಕ್ಟೋಬರ್ ನಲ್ಲಿ ರಿಲೀಸ್ ಆಗಿತ್ತು. ಅಲ್ಲದೇ ಪದವಿ ಪೂರ್ವ ಕಾಲೇಜು ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.
7/ 8
ನವೆಂಬರ್ ನಲ್ಲಿ ತ್ರಿಬಲ್ ರೈಡಿಂಗ್ ಚಿತ್ರ ರಿಲೀಸ್ ಆಗಿತ್ತು. ಮೂವರು ನಟಿಯರಲ್ಲಿ ಅದಿತಿ ಪ್ರಭುದೇವ ಕೂಡ ಒಬ್ಬರು. ಈ ಚಿತ್ರ ಜನರನ್ನು ಮೋಡಿ ಮಾಡಿತ್ತು.
8/ 8
ಡಾಲಿ ಧನಂಜಯ್ ಅವರ ಜೊತೆಗಿನ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಚಿತ್ರ ಬಿಡುಗಡೆ ಆಗಿದೆ. ಹಳ್ಳಿ ಹುಡುಗಿ ಪಾತ್ರದಲ್ಲಿ ಅದಿತಿ ಮಿಂಚಿದ್ದಾರೆ.