Aditi Prabhudeva: 'ಪದವಿಪೂರ್ವ' ಕ್ಲಾಸ್ ಮುಗಿಸಿ, 'ಜಮಾಲಿಗುಡ್ಡ' ಹತ್ತಿದ ಅದಿತಿ! ನಾಳೆ ಎರಡು ಸಿನಿಮಾಗಳಲ್ಲಿ ದಾವಣಗೆರೆ ಬೆಡಗಿ ಮಿಂಚು!
ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಅಭಿನಯದ 2 ಸಿನಿಮಾಗಳು ಶುಕ್ರವಾರ ಅಂದರೆ ನಾಳೆ ಬಿಡುಗಡೆಯಾಗಲು ಸಜ್ಜಾಗಿವೆ. ಅಭಿಮಾನಿಗಳು ಅದಿತಿ ನಟನೆ ನೋಡಲು ಕಾಯ್ತಾ ಇದ್ದಾರೆ. ಹಾಗಾದ್ರೆ ಆ ಸಿನಿಮಾಗಳು ಯಾವುದು?
ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಅಭಿನಯದ 2 ಸಿನಿಮಾಗಳು ಶುಕ್ರವಾರ ಅಂದರೆ ನಾಳೆ ಬಿಡುಗಡೆಯಾಗಲು ಸಜ್ಜಾಗಿವೆ. ಅಭಿಮಾನಿಗಳು ಅದಿತಿ ನಟನೆ ನೋಡಲು ಕಾಯ್ತಾ ಇದ್ದಾರೆ.
2/ 8
'ಒನ್ಸ್ ಅಪಾನ್ ಎ ಟೈಮ್ ಜಮಾಲಿಗುಡ್ಡ' ಚಿತ್ರದಲ್ಲಿ ಡಾಲಿ ಧನಂಜಯ್ ಅವರಿಗೆ ನಟಿ ಅದಿತಿ ಪ್ರಭುದೇವ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ಜಮಾಲಿಗುಡ್ಡ ಸಾಕಷ್ಟು ಕುತೂಹಲ ಸೃಷ್ಟಿಸಿದೆ.
3/ 8
ನಟಿ ಅದಿತಿ ಪ್ರಭುದೇವ ತುಂಬಾ ಸಿಂಪಲ್ ಆಗಿರುವ ಪಾತ್ರದಲ್ಲಿ ಜಮಾಲಿಗುಡ್ಡದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೇ ಹೇಳಿದಂತೆ ಹಳ್ಳಿ ಹುಡುಗಿಯ ಬ್ಯೂಟಿಫುಲ್ ಪಾತ್ರವಂತೆ ಅದು.
4/ 8
ಪದವಿ ಪೂರ್ವ ಕಾಲೇಜಿನಲ್ಲಿ ನಟಿ ಅದಿತಿ ಪ್ರಭುದೇವ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ, ಈ ಸಿನಿಮಾ ಸಹ ಶುಕ್ರವಾರ ಬಿಡುಗಡೆ ಆಗಲಿದೆ.
5/ 8
ಅದಿತಿ ಪ್ರಭುದೇವ ಗೆಳೆಯ ಯಶಸ್ ಪಟ್ಲಾ ಜೊತೆ ನವೆಂಬರ್ 28ರಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ಮದುವೆ ಆಗಿದ್ದಾರೆ.
6/ 8
ಆದಿತಿ ಪ್ರಭುದೇವ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ದಾವಣಗೆರೆಯಲ್ಲಿ ಜನಿಸಿದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್ಮೆಂಟ್ನಲ್ಲಿ ಮಾಸ್ಟರ್ಸ್ ಮುಗಿಸಿದ್ದಾರೆ.
7/ 8
'ಗುಂಡ್ಯಾನ ಹೆಂಡತಿ' ಎಂಬ ಕಿರುತೆರೆ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಇವರು, ನಾಗಕನ್ನಿಕೆ ಸಿರೀಯಲ್ ನಲ್ಲಿ ಶಿವಾನಿ ಪಾತ್ರ ಮಾಡಿದ್ದರು.
8/ 8
ಅಜಯ್ ರಾವ್ ಅವರ `ಧೈರ್ಯಂ' ಚಿತ್ರದಿಂದ ಸಿನಿಮಾ ಆರಂಭಿಸಿದರು. ನಂತರ ಸಿಂಗ, ಬ್ರಹ್ಮಚಾರಿ, ಓಲ್ಡ್ ಮಾಂಕ್, ರಂಗನಾಯಕಿ, ಬಜಾರ್, ತೋತಾಪುರಿ, ಕುಸ್ತಿ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.