ಇತ್ತೀಚೆಗೆ ಬಿಡುಗಡೆಯಾಗಿದ್ದ ಬನಾರಸ್ ಚಿತ್ರವು ಪ್ರೇಕ್ಷಕರ ಮನ ಗೆದ್ದಿತ್ತು. ಮೊದಲ ಸಿನಿಮಾದಲ್ಲಿ ಝೈದ್ ಖಾನ್ ಅದ್ಭುತವಾಗಿ ನಟಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಚಿತ್ರವೂ ಚೆನ್ನಾಗಿ ಮೂಡಿ ಬಂದಿದೆ.
2/ 8
ಬನಾರಸ್ ಚಿತ್ರವು 5 ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಎಲ್ಲಾ ಭಾಷೆಗಳಲ್ಲಿ ಮೆಚ್ಚುಗೆ ಪಡೆದಿದೆ. ಈಗ ಬನಾರಸ್ ಚಿತ್ರದ ನಾಯಕ ಕನ್ನಡಿಗರು ಮೆಚ್ಚುವ ಕೆಲಸ ಮಾಡಿದ್ದಾರೆ.
3/ 8
ಝೈದ್ ಖಾನ್ ಅವರ ಬನಾರಸ್ ಚಿತ್ರದ ನಟನೆ ನೋಡಿ ಬಾಲಿವುಡ್ ನಿಂದ ದೊಡ್ಡ ಆಫರ್ ಬಂದಿದೆ. ಹಿಂದಿಯ ಖ್ಯಾತ ನಿರ್ದೇಶಕರೋರ್ವರು ಒಂದು ಸಿನಿಮಾ ಮಾಡಲು ಇವರನ್ನು ಸಂಪರ್ಕಿಸಿದ್ದಾರಂತೆ. ಅಲ್ಲದೇ ಪ್ರಸಿದ್ಧ ನಟಿ ಸಹ ಇರಲಿದ್ದಾರಂತೆ.
4/ 8
ಆದ್ರೆ ನಟ ಝೈದ್ ಖಾನ್ ಅವರು ಈ ಆಫರ್ ನ್ನು ತಿರಸ್ಕರಿಸಿದ್ದಾರೆ. ಯಾಕಂದ್ರೆ ಆ ನಿರ್ದೇಕರ ಜೊತೆ ಮಾತನಾಡಿದಾಗ ಸಿನಿಮಾ ಇಷ್ಟ ಆಗಿತ್ತಂತೆ. ಆದ್ರೆ ಆ ಚಿತ್ರವನ್ನು ಕನ್ನಡದಲ್ಲೂ ಮಾಡುವಂತೆ ಝೈದ್ ಖಾನ್ ಹೇಳಿದ್ದಾರೆ. ಅದನ್ನು ನಿರ್ದೇಶಕರು ಒಪ್ಪಿಲ್ಲ. ಅದಕ್ಕೆ ರಿಜೆಕ್ಟ್ ಮಾಡಿದ್ದಾರಂತೆ.
5/ 8
ಝೈದ್ ಕಾನ್ ಅವರು ಆ ನಿರ್ದೇಶಕ ಬಳಿ ಈ ರೀತಿ ಹೇಳಿದ್ದಾರಂತೆ. ನೀವು ನನಗೆ ಚಾನ್ಸ್ ಕೊಡಲು ಕಾರಣ ಕನ್ನಡದ ಬನಾರಸ್ ಚಿತ್ರ. ಕನ್ನಡಲ್ಲೇ ಸಿನಿಮಾ ಮಾಡಲ್ಲ ಅಂದ್ರೆ, ನನಗೆ ಹಿಂದಿ ಸಿನಿಮಾ ಬೇಡ ಎಂದಿದ್ದಾರೆ.
6/ 8
ನನಗೆ ಕನ್ನಡ ಸಿನಿಮಾ ರಂಗ ಇಷ್ಟ. ನಾನು ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗುವುದಿಲ್ಲ. ಇಲ್ಲೇ ಒಳ್ಳೆಯ ಸಿನಿಮಾಗಳನ್ನು ತೆಗೆಯುವುದಾಗಿ ನಟ ಝೈದ್ ಖಾನ್ ಹೇಳಿದ್ದಾರೆ.
7/ 8
ನಟ ಝೈದ್ ಖಾನ್ ಕನ್ನಡ ಪ್ರೀತಿ ಕೇಳಿ ಎಲ್ಲರೂ ಬೆರಗಾಗಿದ್ದಾರೆ. ಕನ್ನಡಕ್ಕಾಗಿ ದೊಡ್ಡ ಆಫರ್ ನ್ನೇ ತಿರಸ್ಕರಿಸಿದ್ದಾರೆ. ಇದರಲ್ಲೇ ಅವರ ಕನ್ನಡ ಪ್ರೇಮ ಗೊತ್ತಾಗುತ್ತೆ ಎಂದು ಅಭಿಮಾನಿಗಳು ಹೇಳಿದ್ದಾರೆ.
8/ 8
ಝೈದ್ ಖಾನ್ ಅವರಿಗೆ ಕನ್ನಡದ ಮೇಲಿರುವ ಪ್ರೀತಿ ಕೇಳಿ ಎಲ್ಲರೂ ಹೊಗಳಿದ್ದಾರೆ. ಈ ರೀತಿ ನಟ ಕನ್ನಡಕ್ಕೆ ಬೇಕು ಎಂದಿದ್ದಾರೆ. ಇನ್ನಷ್ಟು ಚಿತ್ರಗಳಲ್ಲಿ ಝೈದ್ ಖಾನ ನಟಿಸಲಿದ್ದಾರೆ.