Vasishta Simha: ಟಗರು ಚಿಟ್ಟೆ ವಸಿಷ್ಠ ಸಿಂಹಗೆ ಬರ್ತ್ಡೇ ಸಂಭ್ರಮ, ಲವ್ ಲಿ ಚಿತ್ರದ ಟೀಸರ್ ಬಿಡುಗಡೆ
ಚಿಟ್ಟೆ, ಸ್ಯಾಂಡಲ್ವುಡ್ ನ ಚಿಟ್ಟೆ ಅಂದ್ರೆ ಅದು ನಟ ವಸಿಷ್ಠ ಸಿಂಹ. ಟಗರು ಖ್ಯಾತಿಯ ವಸಿಷ್ಠ ಸಿಂಹಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇಂದೇ ಅವರ ಮುಂದಿನ ಚಿತ್ರ ಲವ್ ಲಿ ಚಿತ್ರದ ಟೀಸರ್ ಬಿಡುಗಡೆ.
ಚಿಟ್ಟೆ, ಸ್ಯಾಂಡಲ್ವುಡ್ ನ ಚಿಟ್ಟೆ ಅಂದ್ರೆ ಅದು ನಟ ವಸಿಷ್ಠ ಸಿಂಹ. ಟಗರು ಖ್ಯಾತಿಯ ವಸಿಷ್ಠ ಸಿಂಹಗೆ ಇಂದು ಹುಟ್ಟು ಹಬ್ಬದ ಸಂಭ್ರಮ ಇಂದೇ ಅವರ ಮುಂದಿನ ಚಿತ್ರ ಲವ್ ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ.
2/ 8
ಟಗರು ಚಿತ್ರದಲ್ಲಿ ಡಾಲಿ-ಚಿಟ್ಟೆ ಜೋಡಿ ಮೋಡಿ ಮಾಡಿತ್ತು. ಎಲ್ಲರೂ ಅಂದಿನಿಂದ ವಸಿಷ್ಠ ಸಿಂಹರನ್ನು ಚಿಟ್ಟೆ ಎಂದೇ ಕರೆಯುತ್ತಾರೆ. ಈ ಚಿತ್ರಕ್ಕೆ ಬೆಸ್ಟ್ ಸಪೋರ್ಟಿಂಗ್ ಅವಾರ್ಡ್ ಕೂಡ ಬಂದಿತ್ತು.
3/ 8
ಇನು ರಾಜಾಹುಲಿ ಚಿತ್ರದಲ್ಲೂ ವಸಿಷ್ಠ ಸಿಂಹ ಜಗ್ಗನ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ರು. ಅಲ್ಲೂ ಜಗ್ಗನ ಪಾತ್ರದಲ್ಲಿ ಕನ್ನಡಿಗರ ಮನ ಗೆದ್ದಿದ್ರು.
4/ 8
ಮೈಸೂರಿನ ವಸಿಷ್ಠ ಸಿಂಹ ಅವರು, ಶಾರದ ವಿಲಾಸ ಶಾಲೆ ಮತ್ತು ಸದ್ವಿದ್ಯಾ ಶಾಲೆಯಲ್ಲಿ ಓದಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ.
5/ 8
2011 ರಲ್ಲಿ, ವಸಿಷ್ಟ ಅವರು ಸಾಫ್ಟ್ ವೇರ್ ಇಂಜಿನಿಯರ್ ಕೆಲಸವನ್ನು ತೊರೆದರು ಮತ್ತು ನಟನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಲು ನಿರ್ಧರಿಸಿದರು.
6/ 8
ಕೆಜಿಎಫ್ ನಲ್ಲಿ ಕಮಲ್ ಆಗಿ, ಕವಚದಲ್ಲಿ ವಾಸುದೇವ್ ಆಗಿ, ದಯವಿಟ್ಟು ಗಮಿನಿಸಿ ಎಂದು ಹಲವು ಕನ್ನಡ ಚಿತ್ರಗಳಲ್ಲಿ ಈ ಚಿಟ್ಟೆ ಮೋಡಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
7/ 8
ವಸಿಷ್ಠ ಸಿಂಹ ಹಲವಾರು ಚಿತ್ರಗಳಲ್ಲಿ ನೆಗೆಟಿವ್ ರೋಲ್ ಮಾಡಿದ್ದಾರೆ. ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವಿಲನ್ ಪಾತ್ರ ಆದ್ರೂ ಅಬ್ಬಾ ಹೇಗೆ ಮಾಡಿದ್ದಾರೆ ಅನ್ನೋ ರೀತಿ ನಟನೆ ಮಾಡಿ ಸೈ ಅನಿಸಿಕೊಂಡಿದ್ದಾರೆ.
8/ 8
ತಮ್ಮ ಹುಟ್ಟುಹಬ್ಬದ ದಿನವೇ ವಸಿಷ್ಠ ಸಿಂಹ ಅಭಿನಯಿಸಿರು ಲವ್ ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಹ್ಯಾಪಿ ಬರ್ತ್ ಡೇ ವಸಿಷ್ಠ ಸಿಂಹ ಅವರೇ.