ಸ್ಯಾಂಡಲ್‍ವುಡ್‍ನ ಕಿಚ್ಚ ಸುದೀಪ್ ಅವರಿಗೆ ಸಿನಿಮಾ ಅಂದ್ರೆ ಎಷ್ಟು ಇಷ್ಟನೋ, ಕ್ರಿಕೆಟ್ ಅಂದ್ರೂ ತುಂಬಾ ಪ್ರೀತಿ. ಕ್ರಿಕೆಟ್ ಮ್ಯಾಚ್‍ಗಳನ್ನು ತಪ್ಪದೇ ವೀಕ್ಷಿಸುತ್ತಾರೆ. ನಟ ಕಿಚ್ಚ ಸುದೀಪ್ ಮತ್ತು ಕ್ರಿಕಟಿಗ ಶಿಖರ್ ಧವನ್ ಭೇಟಿಯಾಗಿದ್ದಾರೆ. ಎಂತಹ ಅದ್ಭುತ ಮತ್ತು ಪರಿಪೂರ್ಣ ರಾತ್ರಿ ಎಂದು ಸುದೀಪ್ ಅವರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮುಂಬರುವ ಐಪಿಎಲ್‍ಗೆ ಒಳ್ಳೆಯದಾಗಲಿ ಬ್ರದರ್ ಎಂದು ಶಿಖರ್ ಧವನ್ ಅವರಿಗೆ ಸುದೀಪ್ ಅವರು ವಿಶ್ ಮಾಡಿದ್ದಾರೆ. ನಿಮ್ಮ ಜೊತೆ ಕಾಲ ಕಳೆದಿದ್ದು ಖುಷಿ ಆಯ್ತು ಎಂದಿದ್ದಾರೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕ್ರಿಕೆಟ್ ಮತ್ತು ಸಿನಿ ಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ. ಸೂಪರ್ ಎಂದು ಹೇಳಿದ್ದಾರೆ. ಇನ್ನ ಸುದೀಪ್ ಅವರಿಗೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಒಂದೇ ಒಂದು ಸಾರಿ ವಿರಾಟ್ ಅವರನ್ನು ಭೇಟಿಯಾಗಿ ಎಂದು ಹೇಳಿದ್ದಾರೆ ಐಪಿಎಲ್ ಬಂತು ಎಂದ್ರೆ ಸಾಕು ಕ್ರಿಕೆಟ್ ಆಸಕ್ತಿ ಇರುವವರಿಗೆ ಹಬ್ಬ. ಪ್ರತಿ ದಿನ ಮಿಸ್ ಮಾಡ್ದೇ ನೋಡ್ತಾರೆ. ಎಂಜಾಯ್ ಮಾಡ್ತಾರೆ. ಶಿಖರ್ ಧವನ್ ಅವರು ಪಂಜಾಬ್ ಕಿಂಗ್ಸ್ ನಲ್ಲಿ ಇದ್ದಾರೆ. ಸುದೀಪ್ ಅವರು ಹಲವು ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಶಿಖರ್ ಧವನ್ ಸಹ ಬಿಡುವ ಮಾಡಿಕೊಂಡು ಇಬ್ಬರು ಭೇಟಿಯಾಗಿದ್ದಾರೆ. ಸುದೀಪ್ ಗೆ ಕ್ರಿಕೆಟಿಗರ ನಂಟು ಹೆಚ್ಚಾಗಿದೆ. ಅವರಿಗೆ ಆಟ ಇಷ್ಟ ಇರೋದ್ರಿಂದ ಆಗಾಗ ಕ್ರಿಕೆಟಿಗರನ್ನು ಭೇಟಿಯಾಗಿ ಅವರೊಟ್ಟಿಗೆ ಸಮಯ ಕಳೆಯಲು ಇಷ್ಟ ಪಡ್ತಾರೆ.