ಗೌಳಿ ಚಿತ್ರದ ಮೂಲಕ ನಟ ಶ್ರೀನಗರ ಕಿಟ್ಟಿ ಎಲ್ಲೆಡೆ ಮಿಂಚುತ್ತಿದ್ದಾರೆ. ಗೌಳಿ ಪಾತ್ರದಲ್ಲಿ ಅಷ್ಟೊಂದು ತಲ್ಲೀನತೆಯಿಂದಲೇ ಅಭಿನಯಿಸಿದ್ದಾರೆ. ನೈಜ ಕಥೆಯ ಚಿತ್ರಣ ಹಾಗಾಗಿಯೇ ನಿಮ್ಮ ಎದೆಯಲ್ಲಿ ಉಳಿದು ಬಿಡುತ್ತದೆ.
2/ 8
ಜೀ ಕನ್ನಡದಲ್ಲಿ ನಡೆದ ಕರುನಾಡ ಸಂಭ್ರಮದಲ್ಲಿ ನಟ ಶ್ರೀನಗರ ಕಿಟ್ಟಿ ಭಾಗಿಯಾಗಿದ್ದಾರೆ. ಶ್ರೀನಗರ ಕಿಟ್ಟಿಗೆ ಸರ್ಪ್ರೈಸ್ ಕೊಡಲು ಮಗಳು ಪರಿಣಿತರನ್ನು ಕರೆಸಲಾಗಿತ್ತು.
3/ 8
ಮಗಳನ್ನು ನೋಡಿ ಶ್ರೀನಗರ ಕಿಟ್ಟಿ ಭಾವುಕರಾಗಿದ್ದಾರೆ. ಮಗಳ ಬಗ್ಗೆ ಏನಾದ್ರೂ ಹೇಳಿ ಎಂದು ಕೇಳಿದಾಗ, ಅದು ಹೇಳೋದು ಕಷ್ಟ. ನನಗೆ ಎಲ್ಲಾ ಅವಳೇ ಎಂದು ಭಾವುಕರಾಗಿದ್ದಾರೆ.
4/ 8
ಅಪ್ಪ ನನಗೆ ಗಡ್ಡ ಬಿಟ್ರೆ ಇಷ್ಟ ಎಂದು. ನನಗೆ ಹೆಚ್ಚು ಸಮಯ ಕೊಡ್ತಾರೆ. ನನ್ನ ಜೊತೆ ಆಟವಾಡ್ತಾರೆ ಎಂದು ಶ್ರಿನಗರ ಕಿಟ್ಟಿ ಅವರ ಮಗಳು ಪರಿಣಿತ ಹೇಳಿದ್ದಾರೆ.
5/ 8
ಅಪ್ಪ ನಮ್ಮ ಪೇರೆಂಟ್ಸ್ ಟೀಚರ್ಸ್ ಮೀಟಿಂಗ್ ಗೆ ಬರ್ತಾರೆ. ಯಾರಿಗೂ ಕಾಣಬಾರದು ಎಂದು ಮುಖ ಎಲ್ಲಾ ಮುಚ್ಚಿಕೊಂಡು ಬರುತ್ತಾರೆ. ಅಪ್ಪನ ಸಿಲಿಕಾನ್ ಸಿಟಿ ಫಿಲ್ಮ್ ನನಗೆ ಇಷ್ಟ ಎಂದು ಪರಿಣಿತ ಹೇಳಿದ್ದಾರೆ.
6/ 8
ಮನಸ್ಸಿಗೆ ತುಂಬಾ ಕಷ್ಟ ಅನಿಸೋ ದೃಶ್ಯಗಳು, ಅನ್ಯಾಯದ ವಿರುದ್ಧ ಬಂಡೇಳುವ ಗೌಳಿ, ಗೌಳಿಗೆ ಬುದ್ದಿ ಹೇಳೋ ಪಾತ್ರಗಳು, ಗೌಳಿಯ ಒಂದು ಪುಟ್ಟ ಸಂಸಾರ ಸಿನಿಮಾದಲ್ಲಿ ಎದ್ದು ಕಾಣುತ್ತಿದೆ.
7/ 8
ನಿಮ್ಮ ಆಶೀರ್ವಾದ ಎಲ್ಲಿಯವರೆಗೂ ಬಲವಾಗಿರುತ್ತೋ, ಎಷ್ಟು ಪ್ರೀತಿಯಿಂದ ನಮ್ಮನ್ನು ಆರೈಸುತ್ತೀರೋ, ನಮ್ಮ ಕಲಾ ಸೇವೆಗೆ ನೀವು ಕೊಡೋ ಚಪ್ಪಾಳೆ ಮುಖ್ಯ ಆಗುತ್ತೆ ಎಂದು ಅಭಿಮಾನಿಗಳಿಗೆ ಶ್ರೀನಗರ ಕಿಟ್ಟಿ ಹೇಳಿದ್ದಾರೆ.
8/ 8
ಡೈರೆಕ್ಟರ್ ಸೂರಾ ಅವರು ಸತ್ಯ ಘಟನೆಯನ್ನ ಆಧರಿಸಿಯೇ ಗೌಳಿ ಸಿನಿಮಾ ಮಾಡಿದ್ದಾರೆ. ಗ್ಲಾಮರಸ್ ನಟಿ ಪಾವನಾ ಕೂಡ ಇಲ್ಲಿ ಡಿ ಗ್ಲಾಮರ್ ರೋಲ್‍ನಲ್ಲಿಯೇ ಕಾಣಿಸಿಕೊಂಡಿದ್ದಾರೆ.