Vedha Film: ಒಟಿಟಿಯಲ್ಲಿ 'ವೇದ' ಅಬ್ಬರ! 125 ಮಿಲಿಯನ್ ನಿಮಿಷ ವೀಕ್ಷಣೆ ಪಡೆದ ಸಿನಿಮಾ

ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ ವೇದ ಒಟಿಟಿಯಲ್ಲೂ ಅಬ್ಬರಿಸಿದೆ. 125 ಮಿಲಿಯನ್ ನಿಮಿಷಗಳ ವೀಕ್ಷಣೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

First published:

  • 18

    Vedha Film: ಒಟಿಟಿಯಲ್ಲಿ 'ವೇದ' ಅಬ್ಬರ! 125 ಮಿಲಿಯನ್ ನಿಮಿಷ ವೀಕ್ಷಣೆ ಪಡೆದ ಸಿನಿಮಾ

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ ವೇದದಲ್ಲಿ, ಶಿವರಾಜ್ ಕುಮಾರ್ ಪಾತ್ರದ ಗತ್ತು ಬೇರೆ ಇದೆ. ಸಿನಿಮಾದಲ್ಲಿ ಶಿವಣ್ಣ ರೊಚ್ಚಿಗೆದ್ದಿದ್ದಾರೆ. ಅನ್ಯಾಯದ ವಿರುದ್ಧ ಮಚ್ಚು ಎತ್ತಿದ್ದಾರೆ.

    MORE
    GALLERIES

  • 28

    Vedha Film: ಒಟಿಟಿಯಲ್ಲಿ 'ವೇದ' ಅಬ್ಬರ! 125 ಮಿಲಿಯನ್ ನಿಮಿಷ ವೀಕ್ಷಣೆ ಪಡೆದ ಸಿನಿಮಾ

    ವೇದ ಸಿನಿಮಾವನ್ನು ಎ. ಹರ್ಷ ನಿರ್ದೇಶನ ಮಾಡಿದ್ದು, 1960 ರ ಹಿನ್ನೆಲೆಯಲ್ಲಿಯೇ ಸಿನಿಮಾದ ಕಥೆ ಸಾಗುತ್ತದೆ. ಈ ಕಥೆಯಲ್ಲಿ ಮಹಿಳೆಯರ ದಂಡು ದೊಡ್ಡದಿದೆ. ಹೆಣ್ಣುಮಕ್ಕಳೇ ಸ್ಟ್ರಾಂಗ್ ಗುರು ಅನ್ನೋ ಸತ್ಯವೂ ಇಲ್ಲೂ ಸಾಬೀತಾಗಿದೆ.

    MORE
    GALLERIES

  • 38

    Vedha Film: ಒಟಿಟಿಯಲ್ಲಿ 'ವೇದ' ಅಬ್ಬರ! 125 ಮಿಲಿಯನ್ ನಿಮಿಷ ವೀಕ್ಷಣೆ ಪಡೆದ ಸಿನಿಮಾ

    ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ವೇದ ಸಿನಿಮಾ, ಒಟಿಟಿಯಲ್ಲೂ ಮೋಡಿ ಮಾಡಿದೆ. 125 ಮಿಲಿಯನ್ ನಿಮಿಷಗಳ ವೀಕ್ಷಣೆ ಕಂಡಿದ್ದು, ಉತ್ತಮ ಪ್ರದರ್ಶನ ಕಾಣ್ತಿದೆ.

    MORE
    GALLERIES

  • 48

    Vedha Film: ಒಟಿಟಿಯಲ್ಲಿ 'ವೇದ' ಅಬ್ಬರ! 125 ಮಿಲಿಯನ್ ನಿಮಿಷ ವೀಕ್ಷಣೆ ಪಡೆದ ಸಿನಿಮಾ

    ಫೆಬ್ರವರಿ 9 ರಂದು ಜೀ 5 ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಬಿಡುಗಡೆ ಆದ ಕೆಲವೇ ದಿನದಲ್ಲಿ 125 ಮಿಲಿಯನ್ ಗಿಂತಲೂ ಹೆಚ್ಚು ನಿಮಿಷಗಳ ಕಾಲ ಸ್ಟ್ರೀಂ ಆಗಿದೆ.

    MORE
    GALLERIES

  • 58

    Vedha Film: ಒಟಿಟಿಯಲ್ಲಿ 'ವೇದ' ಅಬ್ಬರ! 125 ಮಿಲಿಯನ್ ನಿಮಿಷ ವೀಕ್ಷಣೆ ಪಡೆದ ಸಿನಿಮಾ

    125 ಮಿಲಿಯನ್ ಎಂದರೆ 12 ಕೋಟಿಗೂ ಹೆಚ್ಚು ನಿಮಿಷಗಳ ಕಾಲ ವೇದ ಸಿನಿಮಾ ಜೀ5 ಒಟಿಟಿಯಲ್ಲಿ ಸ್ಟ್ರೀಮ್ ಆಗಿದೆ. ಸುಮಾರು 20.83 ಲಕ್ಷ ಗಂಟೆಗಳ ಕಾಲ ಈ ಸಿನಿಮಾ ಸ್ಟ್ರೀಮ್ ಆಗಿ ದಾಖಲೆ ಬರೆದಿದೆ.

    MORE
    GALLERIES

  • 68

    Vedha Film: ಒಟಿಟಿಯಲ್ಲಿ 'ವೇದ' ಅಬ್ಬರ! 125 ಮಿಲಿಯನ್ ನಿಮಿಷ ವೀಕ್ಷಣೆ ಪಡೆದ ಸಿನಿಮಾ

    ವೇದ ಸಿನಿಮಾವು 125 ಮಿಲಿಯನ್ ನಿಮಿಷ ಸ್ಟ್ರೀಂ ಆಗಿದ್ದಕ್ಕೆ ಶಿವಣ್ಣನ ಅಭಿಮಾನಿಗಳೊಟ್ಟಿಗೆ ಜೀ5 ಸಂಭ್ರಮಿಸಿದೆ. ಸಂತೋಷ್ ಚಿತ್ರಮಂದಿರದ ಎದುರು ಶಿವಣ್ಣನ ದೊಡ್ಡ ಕಟೌಟ್ ಕಟ್ಟಿ ಕುಣಿದು ಕುಪ್ಪಳಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

    MORE
    GALLERIES

  • 78

    Vedha Film: ಒಟಿಟಿಯಲ್ಲಿ 'ವೇದ' ಅಬ್ಬರ! 125 ಮಿಲಿಯನ್ ನಿಮಿಷ ವೀಕ್ಷಣೆ ಪಡೆದ ಸಿನಿಮಾ

    ಮಗಳು ಜಾನಕಿ ಖ್ಯಾತಿಯ ನಟಿ ಗಾನವಿ ಲಕ್ಷ್ಮಣ ಇಲ್ಲಿ ಪುಷ್ಪ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್, ಶಿವಣ್ಣನ ಮಗಳು ಕನಕಾ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ ಶ್ವೇತಾ ಚಂಗಪ್ಪ ಪಾರಿ ಪಾತ್ರವನ್ನು ಮಾಡಿದ್ದಾರೆ.

    MORE
    GALLERIES

  • 88

    Vedha Film: ಒಟಿಟಿಯಲ್ಲಿ 'ವೇದ' ಅಬ್ಬರ! 125 ಮಿಲಿಯನ್ ನಿಮಿಷ ವೀಕ್ಷಣೆ ಪಡೆದ ಸಿನಿಮಾ

    ಶಿವರಾಜ್ ಕುಮಾರ್ ಅವರ ಮೊದಲ ಹೋಂ ಬ್ಯಾನರ್ ಸಿನಿಮಾ ಆಗಿರುವ ವೇದ ಡಿಸೆಂಬರ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ವೇದ ಸಿನಿಮಾವು, ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಮಾತನಾಡುವ ಸಿನಿಮಾ ಆಗಿದೆ.

    MORE
    GALLERIES