Ganavi Lakshman: 'ಮಗಳು ಜಾನಕಿ' ಈಗ ಶಿವಣ್ಣನಿಗೆ ನಾಯಕಿ! ಗಾನವಿ ಹೇಳಿದ 'ವೇದ'ವಾಕ್ಯವೇನು ಗೊತ್ತಾ?
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ 'ವೇದ' ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ 'ಮಗಳು ಜಾನಕಿ' ಖ್ಯಾತಿಯ ಗಾನವಿ ಲಕ್ಷ್ಮಣ್ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಗಾನವಿ ಹೇಳಿದ್ದೇನು?
ಟಿ.ಎನ್. ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ನಟಿ ಗಾನವಿ ಲಕ್ಷ್ಮಣ್, ಇದೀಗ ಶಿವರಾಜ್ ಕುಮಾರ್ ಅವರ 'ವೇದ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
2/ 8
ಕಿರುತೆರೆಯಲ್ಲಿ 'ಜಾನಕಿ' ಆಗಿ ಕನ್ನಡಿಗರ ಮನಸ್ಸು ಗೆದ್ದಿದ್ದ ಗಾನವಿ ಲಕ್ಷ್ಮಣ್ ಚಿತ್ರರಂಗದಲ್ಲೂ ಮಿಂಚಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರನ್ನು ಸೆಳೆದಿದ್ದಾರೆ.
3/ 8
ಗಾನವಿ ಅವರು ಈ ಮೊದಲು ರಿಷಬ್ ಶೆಟ್ಟಿ ನಟನೆಯ 'ಹೀರೋ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ತನ್ನ ಪ್ರೀತಿಗಾಗಿ ಗಂಡನನ್ನೇ ಕೊಲ್ಲುವ ಧೈರ್ಯವನ್ನು ಜನ ನೋಡಿ ಶಾಕ್ ಆಗಿದ್ದರು.
4/ 8
ರಿಷಬ್ ಶೆಟ್ಟಿ ನಟನೆಯ 'ಹೀರೋ' ಸಿನಿಮಾದಲ್ಲಿ ಗಾನವಿ ನಟನೆ ಗಮನ ಸೆಳೆದಿತ್ತು. ಅದರ ಮೂಲಕವೇ 'ವೇದ' ಚಿತ್ರದಲ್ಲೂ ನಟನೆ ಮಾಡಲು ಅವಕಾಶ ಸಿಕ್ಕಿದೆ. ಶಿವಣ್ಣನ ಜೊತೆ ಮೊದಲ ಬಾರಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
5/ 8
'ವೇದ' ಸಿನಿಮಾ ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ. ಈ ಸಿನಿಮಾವನ್ನು ನಿರ್ದೇಶಕ ಹರ್ಷ ತೆರೆಗೆ ತರಲಿದ್ದಾರೆ. ಈ ಸಿನಿಮಾ ಸಹ ಅತಿಮಾನುಷ ಶಕ್ತಿಯ ಕತೆಯುಳ್ಳ ಸಿನಿಮಾ ಆಗಿರಲಿದೆ. ಈ ಸಿನಿಮಾದಲ್ಲಿ ಗಾನವಿಗೆ ನಟಿ ಆಗುವ ಅವಕಾಶ ಸಿಕ್ಕಿದೆ.
6/ 8
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ವೇದ' ಸಿನಿಮಾದ ಬಗ್ಗೆ ನಿರೀಕ್ಷೆ ದೊಡ್ಡ ಮಟ್ಟದಲ್ಲಿಯೇ ಇದೆ. ಚಿತ್ರದ ಪೋಸ್ಟರ್ ಕುತೂಹಲ ಕೆರಳಿಸಿವೆ. 1960 ಕಾಲಘಟ್ಟದ ಕಥೆಯುಳ್ಳ ಈ ಸಿನಿಮಾದಲ್ಲಿ ಅದ್ಭುತ ಕಥೆನೆ ಇದೆ. ನಿರ್ದೇಶಕ ಎ.ಹರ್ಷ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ.
7/ 8
ಸ್ವತಃ ಶಿವರಾಜ್ ಕುಮಾರ್ ಅವರು ತಮ್ಮ ಬ್ಯಾನರ್ ಮೂಲಕವೇ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಚಿತ್ರ ಜೀವನದ ಒಟ್ಟು ಸಿನಿಮಾಗಳ ಲೆಕ್ಕದಲ್ಲಿ ಇದು 125 ನೇ ಸಿನಿಮಾ ಆಗಿದೆ.
8/ 8
ಗಾನವಿ ಅವರು ನಟನೆಗೆ ವಿದಾಯ ಹೇಳಬೇಕು ಎಂದುಕೊಂಡಿದ್ದ ಸಮಯದಲ್ಲಿ 'ವೇದ' ಚಿತ್ರ ಸಿಕ್ಕಿದೆ. "ನನಗೆ ತುಂಬಾ ಖಷಿಯಾಗಿದೆ" ಎಂದು ತಿಳಿಸಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳಿನಲ್ಲಿ ರಿಲೀಸ್ ಆಗಲಿದೆ.