ಸ್ಯಾಂಡಲ್ವುಡ್ನಲ್ಲಿ ಮಿಂಚಿದ್ದ ನಟ ಶಶಿಕುಮಾರ್ ಇಂದು ತಮ್ಮ 57ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಶಶಿಕುಮಾರ್ ಸಿನಿಮಾ ಅಂದ್ರೆ ತುಂಬಾ ಅಚ್ಚು ಮೆಚ್ಚು.
2/ 8
ಶಶಿಕುಮಾರ್ ಅವರು ಮೊದಲ ಚಿತ್ರ 'ಚಿರಂಜೀವಿ ಸುಧಾಕರ'. ರಾಘವೇಂದ್ರ ರಾಜ್ಕುಮಾರ್ ಅಭಿನಯದ ಸಿನಿಮಾದ ಮೂಲಕ ತಮ್ಮ ಸ್ಯಾಂಡಲ್ವುಡ್ ಪ್ರಯಾಣ ಆರಂಭಿಸಿದ್ದರು.
3/ 8
1989 ರಲ್ಲಿ ಅವರು ವಿ. ರವಿಚಂದ್ರನ್, ಪೂನಂ ಧಿಲ್ಲೋನ್ ಮತ್ತು ಶಂಕರ್ ನಾಗ್ ಅವರೊಂದಿಗೆ C.B.I ಶಂಕರ್ ನಟಿಸಿದ ಯುದ್ಧಕಾಂಡದ ಮೂಲಕ ಜನಪ್ರಿಯರಾದರು.
4/ 8
1990 ರಲ್ಲಿ ರಾಣಿ ಮಹಾರಾಣಿ ಮತ್ತು ಬಾರೆ ನನ್ನ ಮುದ್ದಿನ ರಾಣಿ ಎರಡು ಯಶಸ್ವಿ ಚಿತ್ರಗಳು ಕೊಟ್ಟಿದ್ದಾರೆ. ಈ ಸಿನಿಮಾಗಳ ಮೂಲಕ ಶಶಿಕುಮಾರ್ ಅಗ್ರ ನಾಯಕನಾಗಿ ಗುರುತಿಸಿಕೊಂಡರು.
5/ 8
ಹಲವಾರು ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ ಶಶಿಕುಮಾರ್ ಮತ್ತು ಮಾಲಾಶ್ರೀ ಅವರು ಕನ್ನಡ ಚಿತ್ರರಂಗದ ಸಾರ್ವಕಾಲಿಕ ಜನಪ್ರಿಯ ಜೋಡಿಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟರು.
6/ 8
1998 ರಲ್ಲಿ ಬೆಂಗಳೂರು ಟರ್ಫ್ ಕ್ಲಬ್ ಬಳಿ ಕಾರು ಅಪಘಾತ ಆಯ್ತು. ಶಸ್ತ್ರಚಿಕಿತ್ಸೆಗಳು ಅವರ ಲುಕ್ ಬದಲಾಯಿಸಿದವು. ಆದ ಕಾರಣ ಶಶಿಕುಮಾರ್ ಗೆ ಸಿನಿಮಾ ಅವಕಾಶಗಳು ಕಡಿಮೆ ಆದವು.
7/ 8
ಕೆಲವು ವರ್ಷಗಳ ಕಾಲ ಅವರು ಯಜಮಾನ, ಹಬ್ಬ, ಕನಸುಗಾರ, ಸ್ನೇಹಲೋಕ ಮತ್ತು ಯಾರಿಗೆ ಸಲುಗೆ ಸಂಬಳದಂತಹ ಬಹುತಾರಾಗಣಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
8/ 8
ಶಶಿಕುಮಾರ್ ಅವರು ಚಿತ್ರದುರ್ಗವನ್ನು ಪ್ರತಿನಿಧಿಸುವ 13 ನೇ ಲೋಕಸಭೆಯ ಸದಸ್ಯರಾಗಿದ್ದರು. ಮತ್ತು ಜನತಾ ದಳ ಟಿಕೆಟ್ನಲ್ಲಿ ಸ್ಪರ್ಧಿಸಿದ್ದರು. 2006 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಅವರು ಚಿತ್ರದುರ್ಗ ಕ್ಷೇತ್ರದ ಸಂಸದೀಯ ಚುನಾವಣೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ.