Sathish Ninasam: ಇವ್ರು ಈಗ್ಲೇ ಹಿಂಗೆ.. ಇನ್ನೂ ಅವಾಗ್ ಕೇಳ್ಬೇಕಾ? ನೋಡಿ ಹೇಗಿದ್ದಾರೆ ಕ್ವಾಟ್ಲೆ ಸತೀಶ್!
ಸಶ್ ನೀನಾಸಂ(Satish Ninasam).. ಈ ಹೆಸರು ಕೇಳಿದರೆ ನಮಗೆ ತಿಳಿಯದ ಹಾಗೇ ನಮ್ಮ ಮುಖದಲ್ಲಿ ನಗು(Smile) ಬಂದಿರುತ್ತೆ. ಹೌದು, ಸತೀಶ್ ನೀನಾಸಂ ಅಭಿನಯ ಚತುರ.. ತಮ್ಮ ನಟನೆಯಿಂದಲೇ ಎಲ್ಲರನ್ನೂ ನಗಿಸುವ ಕಲೆಗಾರ..
ಸಶ್ ನೀನಾಸಂ(Satish Ninasam).. ಈ ಹೆಸರು ಕೇಳಿದರೆ ನಮಗೆ ತಿಳಿಯದ ಹಾಗೇ ನಮ್ಮ ಮುಖದಲ್ಲಿ ನಗು(Smile) ಬಂದಿರುತ್ತೆ. ಹೌದು, ಸತೀಶ್ ನೀನಾಸಂ ಅಭಿನಯ ಚತುರ.. ತಮ್ಮ ನಟನೆಯಿಂದಲೇ ಎಲ್ಲರನ್ನೂ ನಗಿಸುವ ಕಲೆಗಾರ..
2/ 8
ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಬಂದ ಸತೀಶ್, ಇಂದು ಸ್ಯಾಂಡಲ್ವುಡ್(Sandalwood)ನ ಟಾಪ್ ಹೀರೋಗಳ ಪಟ್ಟಿಯಲ್ಲಿದ್ದಾರೆ.
3/ 8
ನಟ ಸತೀಶ್ ನೀನಾಸಂ ಅವರು ಸಾಮಾನ್ಯವಾಗಿ ಖಾಸಗಿ ವಿಚಾರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ತೀರಾ ಕಮ್ಮಿ. ಕುಟುಂಬದ ಖಾಸಗಿತನಕ್ಕೆ ನೀಡಬೇಕಾದ ಗೌರವವನ್ನು ಅವರು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದ್ದಾರೆ.
4/ 8
ಅವರ ಖಾಸಗಿ ವಿಚಾರಗಳು ಇಂದಿಗೂ ಯಾರಿಗೂ ಗೊತ್ತಿಲ್ಲ. ಕೆಲಸದ ಮೂಲಕವಷ್ಟೇ ಸತೀಶ್ ನಿನಾಸಂ ಎಲ್ಲರಿಗೂ ಪರಿಚಯ. ಅವರಿಗೆ ಮದುವೆ(Marriage) ಆಗಿರುವ ವಿಚಾರವೆ ಹಲವರಿಗೆ ತಿಳಿದಿಲ್ಲ.
5/ 8
ಹೌದು, ಸತೀಶ್ ನೀನಾಸಂ ಅವರು ಸುಪ್ರಿತಾ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿಗೆ ಮನಸ್ವಿತಾ(Manasvitha) ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ. ಬಹುಶಃ ಈ ವಿಚಾರ ಯಾರಿಗೂ ತಿಳಿದಿಲ್ಲ.
6/ 8
ಇದೀಗ ಸತೀಶ್ ನಿನಾಸಂ ತಮ್ಮ ಹಳೆಯ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಕಂಡ ನೆಟ್ಟಿಗರು ಸತೀಶ್ ಚಿತ್ರಕ್ಕೆ ಚಿತ್ರ ವಿಚಿತ್ರ ಕಮೆಂಟ್ ಮಾಡುತ್ತಿದ್ದಾರೆ.
7/ 8
ಸ್ಯಾಂಡಲ್ವುಡ್ನ ಬ್ಯುಸಿ ನಟರಲ್ಲಿ ಸತೀಶ್ ಕೂಡ ಒಬ್ಬರು. ಅವರು ನಟಿಸಿರುವ 'ಪೆಟ್ರೋಮ್ಯಾಕ್ಸ್', 'ಗೋದ್ರಾ', 'ದಸರಾ' ಹಾಗೂ ತಮಿಳಿನ 'ಪಗೈವನುಕು ಅರುಳ್ವೈ' ಸಿನಿಮಾಗಳು ಶೂಟಿಂಗ್ ಮುಗಿಸಿ, ತೆರೆಗೆ ಸಿದ್ಧವಾಗಿವೆ.
8/ 8
ರಚಿತಾ ರಾಮ್ ಜೊತೆಗಿನ 'ಮ್ಯಾಟ್ನೀ' ಸೇರಿದಂತೆ ಒಂದಷ್ಟು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ.'ಮ್ಯಾಟ್ನಿ' ಸಿನಿಮಾ ಒಂದು ರೊಮ್ಯಾಂಟಿಕ್ ಕಮ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಮನೋಹರ್ ಕಂಪಲ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ