Sathish Ninasam: ಒಂದ್ ಕಥೆ ಹೇಳ್ತೀನಿ ಅಂದಿದ್ದ ಸತೀಶ್ ನೀನಾಸಂ ಈಗ ಮೇಕೆ ಕಾಯುತ್ತಿದ್ದಾರೆ..!
Sathish Ninasam New Look: ಅಪ್ಪಟ ದೇಸಿ ಪ್ರತಿಭೆ ಸತೀಶ್ ನೀನಾಸಂ ಲಾಕ್ಡೌನ್ನಲ್ಲಿ ಒಂದ್ ಕಥೆ ಹೇಳ್ತೀನಿ ಅಂತ ಎರಡು ಕಥೆಗಳನ್ನೂ ಹೇಳಿದ್ದರು. ಆದರೆ ಈಗ ಇದ್ದಕ್ಕಿದ್ದಂತೆಯೇ ಮೇಕೆ ಕಾಯೋಕೆ ಹೋಗಿದ್ದಾರೆ. (ಚಿತ್ರಗಳು ಕೃಪೆ: ಸತೀಶ್ ನೀನಾಸಂ ಇನ್ಸ್ಟಾಗ್ರಾಂ ಖಾತೆ)
ಲಾಕ್ಡೌನ್ನಲ್ಲಿ ಹಲವಾರು ಸೆಲೆಬ್ರಿಟಿಗಳು ತಮ್ಮ ಹಳ್ಳಿಗೆ ಹೋಗಿ ಕೃಷಿ ಮಾಡುವತ್ತ ಆಸಕ್ತಿ ತೋರಿದ್ದಾರೆ. ನಿಖಿಲ್ ಹಾಗೂ ದರ್ಶನ್ ತಮ್ಮ ತಮ್ಮ ತೋಟದಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗಿರುವಾಗಲೇ ಸತೀಶ್ ನೀನಾಸಂ ಮೇಕೆ ಕಾಯುತ್ತಾ ಕಾಣಿಸಿಕೊಂಡಿದ್ದಾರೆ.
2/ 12
ಬಿಳಿ ಅಂಗಿ, ಪಂಚೆ ತೊಟ್ಟು ಮೇಕೆ ಹಿಂಡಿನ ಮಧ್ಯೆ ನಿಂತಿರುವ ಸತೀಶ್ ನೀನಾಸಂ ಅವರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
3/ 12
ಪಕ್ಕಾ ಹೈದನ ಸ್ಟೈಲ್ನಲ್ಲಿರುವ ಸತೀಶ್ ನೀನಾಸಂ ನಿಜಕ್ಕೂ ಮೇಕೆ ಕಾಯಲು ಹೋಗಿಲ್ಲ.
4/ 12
ಲಾಕ್ಡೌನ್ನಲ್ಲಿ ಸತೀಶ್ ಆಡಿಯೋ ಹೌಸ್ ಯೂಟ್ಯೂಬ್ ಚಾನೆಲ್ ಮೂಲಕ ಸ್ಪೂರ್ತಿದಾಯಕ ಕಥೆಗಳನ್ನು ಹೇಳುವ ಕೆಲಸಕ್ಕೆ ಕೈ ಹಾಕಿದ್ದಾರೆ ಈ ನಟ.
5/ 12
ಕಥೆ ಹೇಳುವ 2ನೇ ಸಂಚಿಕೆಯಲ್ಲಿ ಐದು ರೂಪಾಯಿ ಡಾಕ್ಟರ್ ಕುರಿತಾಗಿ ಕಥೆ ಹೇಳಿದ್ದರು. ಆ ಸಂಚಿಕೆ ಹೇಗನಿಸಿತ್ತು ಎಂದು ಕೇಳಲು ಸತೀಶ್ ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
6/ 12
ಫೋಟೋಗಳ ಜೊತೆಗೆ ಒಂದು ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
7/ 12
ಮೇಕೆ ಕಾಯುವ ವಿಡಿಯೋ ಹಂಚಿಕೊಳ್ಳುವ ಮೂಲಕ ಸತೀಶ್ ನೀನಾಸಂ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
8/ 12
ಸತೀಶ್ ನೀನಾಸಂ ಅಭಿನಯದ ಗೋದ್ರಾ ಸಿನಿಮಾದ ಹೊಸ ಪೋಸ್ಟರ್
9/ 12
ಸತೀಶ್ ನೀನಾಸಂ ಅವರ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿತ್ತು ಈ ಪೋಸ್ಟರ್