ಮತ್ತೊಂದು ಫೋಟೋದಲ್ಲಿ ಯಶ್ ಅವರ ಪ್ರೀತಿಯ ಮಗಳು ಐರಾ ತನ್ನ ತಾತನಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಳ್ಳು, ಬೆಲ್ಲ ಹಂಚುತ್ತಿರುವುದನ್ನು (ಎಳ್ಳು ಬೀರುವುದು) ಕಾಣಬಹುದಾಗಿದೆ. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದಂದು ಹೆಣ್ಣು ಮಕ್ಕಳು ಎಳ್ಳು ಬೀರುವುದು ವಿಶೇಷ. ಸದ್ಯ ವರ್ಷದ ಮೊದಲ ಹಬ್ಬದಂದೇ ಐರಾ ಯಶ್, ರಾಧಿಕಾಗೆ ಎಳ್ಳು ಬೆಲ್ಲ ನೀಡುವ ಮೂಲಕ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಿದ್ದಾರೆ ಎಂದೇ ಹೇಳಬಹುದು.
ಎಷ್ಟೇ ದೊಡ್ಡ ಸ್ಟಾರ್ ಆದರೂ ಯಶ್ ತಾವೊಬ್ಬರು ಸರಳ ವ್ಯಕ್ತಿ ಎಂಬುವುದನ್ನು ಪದೇ ಪದೇ ಸಾಬೀತು ಪಡಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಹಳ್ಳಿಯಲ್ಲಿಂದು ಯಶ್ ಬಹಳ ಸರಳವಾಗಿ ಫ್ಯಾಮಿಲಿಯೊಂದಿಗೆ ಸುಗ್ಗಿ ಹಬ್ಬ ಆಚರಿಸಿದ್ದಾರೆ. ಭಾರತಾದ್ಯಂತ ದೊಡ್ಡ ನಟರಾಗಿ ಯಶ್ ಮಿಂಚುತ್ತಿದ್ದರೂ, ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಬಗ್ಗೆ ವಿಶೇಷ ಅಭಿಮಾನ ಹೊಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.