Rishi: ಮುದ್ದಿನ ಮಡದಿಗೆ ಕ್ಯೂಟಾಗಿ ಮೊದಲ ವಿವಾಹ ವಾರ್ಷಿಕೋತ್ಸವದ ವಿಶ್ ಮಾಡಿದ ನಟ ರಿಷಿ..!
Rishi-Swathi: ಆಪರೇಷನ್ ಅಲುಮೇಲಮ್ಮ ಹಾಗೂ ಕವಲುದಾರಿ ಚಿತ್ರಗಳ ಖ್ಯಾತಿಯ ನಟ ರಿಷಿ ಅವರ ದಾಂಪತ್ಯಕ್ಕೆ ಒಂದು ವರ್ಷದ ಸಂಭ್ರಮ. ಕಳೆದ ವರ್ಷ ಇದೇ ದಿನ ಬಹುಕಾಲದ ಗೆಳತಿ ಸ್ವಾತಿ ಅವರ ಜೊತೆ ಹೊಸ ಜೀವನ ಆರಂಭಿದ್ದರು ರಿಷಿ. ಇಂದು ಮುದ್ದಿನ ಪತ್ನಿಗೆ ಮೊದಲ ವಿವಾಹ ವಾರ್ಷಿಕೋತ್ಸವದ ವಿಶ್ ಮಾಡಿದ್ದಾರೆ ಈ ಸಿಂಪಲ್ ನಟ. ಚಿತ್ರಗಳು ಕೃಪೆ: ರಿಷಿ: ಫೇಸ್ಬುಕ್ ಖಾತೆ)
ಕನ್ನಡದ ಉದಯೋನ್ಮುಖ ನಟ ರಿಷಿ ಇಂದು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
2/ 17
ಕಳೆದ ನವೆಂಬರ್ನಲ್ಲಿ ಇದೇ ದಿನ ರಿಷಿ ಬಹುಕಾಲದ ಗೆಳತಿ ಸ್ವಾತಿ ಅವರನ್ನು ವರಿಸಿದ್ದರು.
3/ 17
ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವದಂದು ಮುದ್ದಿನ ಹೆಂಡತಿಗೆ ಫೇಸ್ಬುಕ್ನಲ್ಲಿ ಮುದ್ದಾದ ಪೋಸ್ಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ ರಿಷಿ.
4/ 17
ನನ್ನ ಸುಂದರ ಹುಡುಗಿ... ಈಗಾಗಲೇ ಒಂದು ವರ್ಷ ಮುಗಿದಿದೆ. ನಿನ್ನ ನಗುವಿಗೆ ಎಚ್ಚರಗೊಂಡು ಪ್ರತಿದಿನ ಖುಷಿಪಡಲು ಸಾಕಷ್ಟು ಸಮಯ ಉಳಿದಿಲ್ಲ ಎಂದೆನಿಸುತ್ತದೆ ಎನ್ನುತ್ತಲೇ ವಿವಾಹ ವಾರ್ಷಿಕೋತ್ಸವದ ಶುಭ ಕೋರಿದ್ದಾರೆ ರಿಷಿ.
5/ 17
ಈ ಜೋಡಿಯ ನಿಶ್ಚಿತಾರ್ಥ ಹೈದರಾಬಾದಿನಲ್ಲಿ ನಡೆದರೆ, ವಿವಾಹ ಚೆನ್ನೈನಲ್ಲಿ ಆಗಿತ್ತು.
6/ 17
ನಟ ರಿಷಿ ಕಿರುತೆರೆ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ವವರು.