ಪ್ಯಾನ್ ಇಂಡಿಯಾ ಸ್ಟಾರ್, ನಿರ್ದೇಶಕ ರಿಷಬ್ ಶೆಟ್ಟಿ ಮಗಳು ರಾಧ್ಯಾ ಮೊದಲನೇ ವರ್ಷದ ಹುಟ್ಟುಹಬ್ಬ ತುಂಬಾ ಗ್ರ್ಯಾಂಡ್ ಆಗಿ ಆಚರಿಸಲಾಗಿದೆ. ಹುಟ್ಟುಹಬ್ಬದ ಆಚರಣೆಗೆ ಹಲವು ಗೆಸ್ಟ್ ಗಳು ಬಂದಿದ್ದರು. ನಟ ಅನಿರುದ್ಧ್ ಮತ್ತು ಅವರ ಪತ್ನಿ ಸಹ ರಾಧ್ಯಾ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು. ಸಿನಿಮಾ ಮಾತ್ರವಲ್ಲದೇ ರಾಜಕೀಯ ವ್ಯಕ್ತಿಗಳು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಪ್ರತಾಪ್ ಸಿಂಹ, ಸಿಟಿ ರವಿ, ಪ್ರಮೋದ್ ಶೆಟ್ಟಿ ಸಹ ಪಾಲ್ಗೊಂಡಿದ್ದರು. ಅಲ್ಲದೇ ಸ್ಯಾಂಡಲ್‍ವುಡ್ ಮೋಹಕತಾರೆ ರಮ್ಯಾ ಸಹ ರಿಷಬ್ ಮಗಳ ಬರ್ತ್‍ಡೇಗೆ ಬಂದಿದ್ದರು. ಆಗ ಪ್ರತಾಪ್ ಸಿಂಹ ಅವರ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಅಭಿಷೇಕ್ ಅಂಬರೀಶ್ ಸೇರಿದಂತೆ ಸಾಕಷ್ಟು ಸ್ಯಾಂಡಲ್‍ವುಡ್ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಟಾಣಿ ರಾಧ್ಯಾಗೆ ಶುಭ ಹಾರೈಸಿದ್ದಾರೆ. ನಟ ರಿಷಬ್ ಮತ್ತು ಪ್ರಗತಿ ಅವರ ಮಗಳು ರಾಧ್ಯಾ ಒಂದು ವರ್ಷದ ಜನ್ಮ ದಿನಕ್ಕೆಂದೇ ಒಂದು ವಿಶೇಷ ವಿಡಿಯೋ ಮಾಡಿಸಿದ್ದರು. ಅದನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ವಿಶೇಷ ವಿಡಿಯೋದಲ್ಲಿ ಪುಟಾಣಿ ರಾಧ್ಯಾ ತುಂಬಾ ಮುದ್ದಾಗಿ ಕಾಣ್ತಾ ಇದ್ದಾಳೆ. ಎಲ್ಲಾ ಫೋಟೋಗಳು ಚೆಂದವಾಗಿ ಮೂಡಿ ಬಂದಿವೆ. ರಿಷಬ್ ಶೆಟ್ಟಿ ಅವರು ಬಹಳ ದಿನಗಳ ನಂತರದಲ್ಲಿ ಸ್ಯಾಂಡಲ್‍ವುಡ್ ಕಲಾವಿದರ ಜೊತೆಗೆ ಸುಂದರ ಕ್ಷಣಗಳನ್ನು ಕಳೆದಿದ್ದಾರೆ. ಖುಷಿಯಾಗಿದ್ದರು.