ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರ್ದು ಅಂತಾರೆ. ಆದರೂ ಕೆಲವರು ಸಣ್ಣ ಪುಟ್ಟ ಸಹಾಯಕ್ಕೇ ಇಂದು ದೊಡ್ಡ ದಾನಿಗಳಂತೆ ಪೋಸ್ ನೀಡುತ್ತಿದ್ದಾರೆ. ಆದರೆ ಇವರೆಲ್ಲರ ಮಧ್ಯೆ ಸ್ಯಾಂಡಲ್ವುಡ್ ನಟರೊಬ್ಬರು ಪರೋಪಕಾರಂ ಪರಂ ಧರ್ಮ ಎಂಬಂತೆ ತಾವು ಮಾಡಿದ್ದು ತಮ್ಮಲ್ಲೇ ಇರಲಿ ಎಂಬಂತೆ ಕೈಲಾದ ಸೇವೆ ಮಾಡುತ್ತಿದ್ದಾರೆ.
2/ 9
ಇವರ ಹೆಸರು ರಾಹುಲ್ ಐನಾಪುರ. ಎಲ್ಲೋ ಹೆಸರು ಕೇಳಿದ್ದೀನಿ ಅಂದ್ಕೊಂಡರೆ ಖಂಡಿತ ಹೌದು, ತ್ರಾಟಕ, ಗತ್ತು ಮುಂತಾದ ಚಿತ್ರಗಳಲ್ಲಿ ನಟಿಸಿ ಅಭಿನಯಕ್ಕೆ ಸೈ ಅಂದ ಪ್ರತಿಭಾವಂತ ನಟ.
3/ 9
ರಾಜಕಾರಣಿ ಕುಟುಂಬದ ಹಿನ್ನೆಲೆಯಲ್ಲಿರುವ ರಾಹುಲ್ ಅವರು ಇದೀಗ ಕೊರೋನಾದಿಂದ ಸಂಕಷ್ಟಕ್ಕೀಡಾದ ಬಡವರ ಕಣ್ಣೀರು ಒರೆಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ.
4/ 9
ತಮ್ಮ ಕಾರಿನಲ್ಲಿ ದಿನಸಿ ಇತ್ಯಾದಿ ದಿನೋಪಯೋಗಿ ವಸ್ತುಗಳನ್ನು ತುಂಬಿಕೊಂಡು ಓಡಾಡುವ ರಾಹುಲ್ ಅವರು, ಬಡವರನ್ನು ಕಂಡಾಗ ನಿಲ್ಲಿಸಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಆದರೆ ತಮ್ಮ ಈ ಸಮಾಜಮುಖಿ ಸೇವೆಯನ್ನು ನೇಮ್-ಫೇಮ್ ಬೆಳೆಸಿಕೊಳ್ಳಲು ಅವರು ಬಳಸುತ್ತಿಲ್ಲ ಎಂಬುದು ವಿಶೇಷ.
5/ 9
ತ್ರಾಟಕ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ರಾಹುಲ್ ಅವರು ಸದ್ಯ ಬಿಜಾಪುರದ ಐನಾಪುರದ ಸುತ್ತ ಮುತ್ತ ಅನೇಕರಿಗೆ ಆಹಾರ ಧಾನ್ಯಗಳನ್ನು ವಿತರಿಸಿದ್ದಾರೆ. ಅಲ್ಲದೆ ಈಗಲೂ ತಮ್ಮ ಕಾರಿನಲ್ಲಿ ದಿನಸಿಯನ್ನು ತುಂಬಿಸಿಟ್ಟುಕೊಂಡಿದ್ದಾರೆ.
6/ 9
ಲಾಕ್ಡೌನ್ನಿಂದ ಸಂಕಷ್ಟಕ್ಕೆ ಈಡಾಗಿರುವ ಯಾರೇ ಎದುರಿಗೆ ಸಿಕ್ಕರೂ ಅವರಿಗೆ ಆಹಾರ ಧಾನ್ಯಗಳನ್ನು ನೀಡಿ ನೆರವಿನ ಹಸ್ತ ಚಾಚುತ್ತಿದ್ದಾರೆ. ಇನ್ನು ರಾಹುಲ್ ಅವರ ಕಾರ್ಯಕ್ಕೆ ಅವರ ತಾಯಿ ಕೂಡ ಬೆಂಬಲವಾಗಿ ನಿಂತಿದ್ದಾರೆ.
7/ 9
ತಾಯಿ ವಸುಂಧರಾ ಅವರು ಕೂಡ ಸ್ಥಳೀಯ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ, ಆರೋಗ್ಯ ಅಧಿಕಾರಿಗಳ ಚಹಾ-ಆಹಾರಗಳನ್ನು ನೀಡುತ್ತಾ ಮಾನವೀಯ ಮುಖಕ್ಕೆ ಕನ್ನಡಿಯಾಗಿ ನಿಂತಿದ್ದಾರೆ.
8/ 9
ಒಟ್ಟಿನಲ್ಲಿ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರ್ದು ಎಂಬುದನ್ನು ಪಾಲಿಸುತ್ತಿರುವ ಸ್ಯಾಂಡಲ್ವುಡ್ ನಟ ರಾಹುಲ್ ಐನಾಪುರ ಅವರ ಕಾರ್ಯಕ್ಕೆ ದೇವರು ಒಳ್ಳೆದು ಮಾಡಲಿ ಎಂದು ಆಶಿಸೋಣ.