PHOTOS: ಅನು ಪ್ರಭಾಕರ್- ರಘು ಮುಖರ್ಜಿ ಮುದ್ದು ಮಗಳು ಹೇಗಿದ್ದಾಳೆ ಗೊತ್ತಾ?

Raghu Mukherjee: ಬಾಲನಟಿಯಾಗಿ ಸ್ಯಾಂಡಲ್​ವುಡ್ ಪ್ರವೇಶಿಸಿದ ಅನು ಪ್ರಭಾಕರ್ 20ರ ದಶಕದಲ್ಲಿ ಶಿವರಾಜ್​ ಕುಮಾರ್, ರಾಮ್​ಕುಮಾರ್, ರಮೇಶ್ ಅರವಿಂದ್, ವಿಷ್ಣುವರ್ಧನ್ ಮುಂತಾದ ಖ್ಯಾತ ನಟರ ಜೊತೆ ತೆರೆ ಹಂಚಿಕೊಂಡವರು. 2002ರಲ್ಲಿ ಹಿರಿಯ ನಟಿ ಜಯಂತಿ ಅವರ ಮಗನ ಜೊತೆ ವಿವಾಹವಾಗಿದ್ದ ಅನು ಪ್ರಭಾಕರ್ 2014ರಲ್ಲಿ ವಿಚ್ಚೇದನ ಪಡೆದಿದ್ದರು. ಬಳಿಕ, ಬಹುಭಾಷಾ ನಟ ರಘು ಮುಖರ್ಜಿ ಜೊತೆ ಸಪ್ತಪದಿ ತುಳಿದಿದ್ದರು. ರಘು ಮುಖರ್ಜಿ 'ಪ್ಯಾರೀಸ್​ ಪ್ರಣಯ' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರೂ ಅವರಿಗೆ ಹೆಸರು ತಂದುಕೊಟ್ಟಿದ್ದು 'ಸವಾರಿ' ಸಿನಿಮಾ. ಕಳೆದ ವರ್ಷ ಈ ದಂಪತಿಗೆ ನಂದನಾ ಎಂಬ ಮುದ್ದಾದ ಮಗಳು ಹುಟ್ಟಿದ್ದಾಳೆ. 2017ರಲ್ಲಿ ತೆರೆಕಂಡ 'ದಯವಿಟ್ಟು ಗಮನಿಸಿ' ಸಿನಿಮಾದಲ್ಲಿ ರಘು ಮುಖರ್ಜಿ ನಟಿಸಿದ್ದರು. ಸದ್ಯಕ್ಕೆ ಅನು ಪ್ರಭಾಕರ್ ಮಗಳ ಆರೈಕೆಯತ್ತ ಗಮನ ಹರಿಸಿರುವುದರಿಂದ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದಾರೆ. ಮಗಳ ಜೊತೆಗಿನ ಅನು ಪ್ರಭಾಕರ್- ರಘು ಮುಖರ್ಜಿ ದಂಪತಿಯ ಫೋಟೋಗಳು ಇಲ್ಲಿವೆ...

  • News18
  • |
First published: