ನೆನಪಿರಲಿ ಪ್ರೇಮ್ ಅವರು ಸ್ಯಾಂಡಲ್‍ವುಡ್‍ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಇಷ್ಟ ಆಗಿದ್ದಾರೆ. ಈಗ ಅವರ ಮಗಳು ಅಮೃತಾ ಪ್ರೇಮ್ ಅವರು ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.
2/ 8
ಅಮೃತಾ ಪ್ರೇಮ್ ಟಗರು ಪಲ್ಯ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಡಾಲಿ ಧನಂಜಯ್ ಅವರ ಬ್ಯಾನರ್‍ನಲ್ಲಿ ಟಗರು ಪಲ್ಯ ಸಿನಿಮಾ ನಿರ್ಮಾಣವಾಗುತ್ತಿದೆ.
3/ 8
ನಟಿ ಅಮೃತಾ ಪ್ರೇಮ್ ಅವರು ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನೋಡೋಕೆ ತುಂಬಾ ಮುದ್ದಾಗಿ ಕಾಣ್ತಾ ಇದ್ದಾರೆ.
4/ 8
ಬ್ಲ್ಯೂ ಸೀರೆಯಲ್ಲಿ ಚೆಂದವಾಗಿ ರೆಡಿಯಾಗಿದ್ದಾರೆ. ಕಣ್ಣು ಮಾತನಾಡಲಿ ಎಂದು ತಮ್ಮ ಫೋಟೋಗಳಿಗೆ ಕ್ಯಾಪ್ಶನ್ ಹಾಕಿಕೊಂಡಿದ್ದಾರೆ. ನೀವು ಗೊಂಬೆಯಂತೆ ಕಾಣ್ತೀರಿ ಎಂದು ಫ್ಯಾನ್ಸ್ ಹೇಳಿದ್ದಾರೆ. ಅಲ್ಲದೇ ಅಮೃತಾ ಅವರ ಫೋಟೋಗಳಿಗೆ 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.
5/ 8
'ಟಗರು ಪಲ್ಯ' ಸಿನಿಮಾದಲ್ಲಿ ನಾಗಭೂಷಣ್ ಹೀರೋ ಆಗಿದ್ದಾರೆ. ಅಮೃತಾ ಪ್ರೇಮ್ ಅವರದ್ದು ಹಳ್ಳಿ ಹುಡುಗಿ ಪಾತ್ರ. ಆ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರಂತೆ.
6/ 8
ಟಗರು ಪಲ್ಯ ಸಿನಿಮಾದ ನಿರ್ದೇಶಕರು ಉಮೇಶ್ ಕೆ. ಕೃಪ. ಇದೊಂದು ಮಂಡ್ಯ ಭಾಗದ ಕಥೆ. ಮಂಡ್ಯ ಸೊಗಡಿನ ಭಾಷೆ ಕಲಿತು, ಸಿನಿಮಾದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಹಳ್ಳಿ ಹುಡುಗಿ ಪಾತ್ರ ಮಾಡುವುದು ಸುಲಭದ ವಿಷಯವಲ್ಲ. ಭಾಷೆ ಮೇಲೆ ಅವರಿಗೆ ತುಂಬ ಹಿಡಿತ ಇದೆ ಎಂದು ನಿರ್ದೇಶಕರು ಹೇಳಿದ್ದರು.
7/ 8
ಅಮೃತಾ ಪ್ರೇಮ್ ಅವರು ತಮ್ಮ ಚೊಚ್ಚಲ ಸಿನಿಮಾಗೆ 10 ಲಕ್ಷ ಸಂಭಾವನೆ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಆದ್ರೆ ಆ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
8/ 8
ಅಮೃತಾ ಪ್ರೇಮ್ ಅವರ ಅಭಿನಯ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಾ ಇದ್ದಾರೆ. ಅಪ್ಪನ ರೀತಿ ಇವರು ಮೋಡಿ ಮಾಡ್ತಾರಾ ನೋಡಬೇಕು.