ಕಾಂತಾರ ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ ರಿಷಬ್ ಶೆಟ್ಟಿ ಈಗ ಎಲ್ಲರಿಗೂ ಚಿರಪರಿಚಿತ. ಕಾಡಿನ ಜನರ ಕಷ್ಟಗಳು, ಬದುಕಿನ ಬವಣೆ, ನಂಬಿಕೆ, ದೈವಾರಾಧನೆಯನ್ನು ಸಿನಿಮಾ ಮೂಲಕ ತೋರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.
2/ 8
ಇದೀಗ ನಟ ರಿಯಲ್ನಲ್ಲಿ ಕಾಡು ಸುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಅಲ್ಲಿನ ವಾಸ್ತವತೆಯನ್ನು ಹತ್ತಿರದಿಂದ ನೋಡಿ ತಿಳಿದುಕೊಂಡಿದ್ದಾರೆ.
3/ 8
ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳು ಎಂದು ನಟ ಪೋಸ್ಟ್ ಮಾಡಿದ್ದಾರೆ.
4/ 8
ರಿಷಬ್ ಅವರು ತಮ್ಮ ಮನವಿಯನ್ನು ಸಿಎಂ ಕೈಗೆ ಹಸ್ತಾಂತರಿಸುವ ಫೋಟೋ ಶೇರ್ ಮಾಡಿದ್ದಾರೆ. ಇದರಲ್ಲಿ ನಟ ನೇರಳೆ ಬಣ್ಣದ ಶರ್ಟ್ ಧರಿಸಿ ವೈಟ್ ಪಂಚೆ ಉಟ್ಟುಕೊಂಡಿದ್ದರು.
5/ 8
ರಿಷಬ್ ಅವರು ಈ ಫೋಟೋ ಶೇರ್ ಮಾಡಿದಾಗ ನೆಟ್ಟಿಗರು ಕಮೆಂಟ್ ಮಾಡಿ ನಟನ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
6/ 8
ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್ನಲ್ಲಿ ಮಾಡಿರುವ ಪೋಸ್ಟ್ಗೆ 7 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನಟನ ಕಾರ್ಯಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
7/ 8
ನಟ ಸದ್ಯ ಕಾಂತಾರದ ಭಾಗ 2 ಸಿನಿಮಾ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದು ಸೀಕ್ವೆಲ್ಲ ಅಲ್ಲ ಕಾಂತಾರದ ಪ್ರೀಕ್ವೆಲ್ ಆಗಿರಲಿದೆ.
8/ 8
ಈ ಸಂಬಂಧ ನಟ ಬ್ಯಾಚುರಲ್ ಪಾರ್ಟಿ ಸಿನಿಮಾದಿಂದ ಕೂಡಾ ಹೊರಗೆ ಬಂದಿದ್ದಾರೆ. ಸದ್ಯ ರಿಷಬ್ ಅವರು ಕಾಂತಾರದ ಭಾಗ 2 ಸಿನಿಮಾದ ಮೇಲೆ ಸಂಪೂರ್ಣ ಗಮನ ನೀಡಲಿದ್ದಾರೆ.
First published:
18
Kantara Hero: ಕಾಡು ಸುತ್ತಿ ಬಂದು ಸಿಎಂ ಭೇಟಿಯಾದ ರಿಷಬ್ ಶೆಟ್ಟಿ! ಕಾರಣವೇನು?