Duniya Vijay Birthday: ದುನಿಯಾ ವಿಜಿ ಬರ್ತ್ಡೇ! ತೆಲುಗು ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಅವರಿಗೆ ಈ ಬರ್ತ್ಡೇ ತುಂಬಾ ಸ್ಪೆಷಲ್. ತೆಲುಗು ಸಿನಿಮಾ ವೀರಸಿಂಹ ರೆಡ್ಡಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಾಲಯ್ಯ ಜೊತೆ ನಟಿಸೋಕೆ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?
ತೆಲುಗಿನ ವೀರಸಿಂಹ ರೆಡ್ಡಿ ಸಿನಿಮಾ ಸಖತ್ ಟ್ರೆಂಡಿಂಗ್ ಆಗಿದೆ. ಈ ಸಿನಿಮಾ ಕರ್ನಾಟಕದಲ್ಲಿಯೂ ಅದ್ಧೂರಿ ಪ್ರೀ ಬುಕ್ಕಿಂಗ್ ದಾಖಲೆ ಮಾಡಿದೆ. ಈಗಲೂ ಸಕ್ಸಸ್ಫುಲ್ ಆಗಿ ಓಡುತ್ತಿದೆ. ಕಾರಣ ಏನು ಗೊತ್ತಾ? ಇದರಲ್ಲಿ ನಟ ವಿಜಯ್ ನಟಿಸಿದ್ದಾರೆ.
2/ 9
ಸ್ಯಾಂಡಲ್ವುಡ್ ಕರಿಯ, ದುನಿಯಾ ವಿಜಯ್ ಈ ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ಭಾರೀ ಕ್ರೇಜ್ ಸೃಷ್ಟಿಸಿದ್ದಾರೆ. ಇನ್ನೊಂದು ರೇಂಜ್ನಲ್ಲಿ ಮಿಂಚಿದ್ದಾರೆ.
3/ 9
ಇಂದು ನಟ ದುನಿಯಾ ವಿಜಯ್ಗೆ ಬರ್ತ್ಡೇ ಸಂಭ್ರಮ. ನಟ 49 ವರ್ಷದ ಬರ್ತ್ಡೇ ಸಂಭ್ರಮದಲ್ಲಿದ್ದಾರೆ. ಈ ವರ್ಷದ ಬರ್ತ್ಡೇ ಸಂದರ್ಭದಲ್ಲಿ ನಟನಿಗೆ ಡಬಲ್ ಖುಷಿ ಇದೆ.
4/ 9
ದುನಿಯಾ ವಿಜಯ್ ತೆಲುಗು ಸಿನಿಮಾ ಸಖತ್ ಹವಾ ಮಾಡಿದ್ದು ಒಂದು ಖುಷಿಯಾದ್ರೆ, ಭೀಮಾ ಟೀಸರ್ ರಿಲೀಸ್ ಮತ್ತೊಂದು ಸಂಭ್ರಮ. ಹಾಗಾಗಿ ವಿಜಯ್ಗೆ ಈ ಬರ್ತ್ಡೇ ಸ್ಪೆಷಲ್.
5/ 9
ತೆಲುಗು ಸಿನಿಮಾದಲ್ಲಿ ನಟಿಸೋಕೆ ದುನಿಯಾ ವಿಜಯ್ ಪಡೆದ ಸಂಭಾವನೆ ಎಷ್ಟು ಗೊತ್ತಾ? ಬಾಲಯ್ಯ ಎದುರಾಗಿ ವಿಲನ್ ಪಾತ್ರ ಮಾಡೋದಂದ್ರೆ ಇದೊಂದು ಬಂಪರ್ ಅವಕಾಶವೇ ಸರಿ. ಇದಕ್ಕೆ ವಿಜಯ್ ಎಷ್ಟು ಸಂಭಾವನೆ ಪಡೆದಿದ್ದಾರೆ ಗೊತ್ತೇ?
6/ 9
ಟಾಲಿವುಡ್ ಬಾಲಯ್ಯನ ದಿಲ್ ಕದ್ದ ಕನ್ನಡದ ಹೀರೋ ವಿಜಯ್ ಅವರು ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ಮುಸಲಿ ಮಡುಗು ಪ್ರತಾಪ್ ರೆಡ್ಡಿ ಎನ್ನುವ ಪಾತ್ರವನ್ನು ಮಾಡಿದ್ದಾರೆ.
7/ 9
ಈ ಸಿನಿಮಾಗಾಗಿ ಕನ್ನಡದ ನಟ ದುನಿಯಾ ವಿಜಯ್ ಪಡೆದ ಸಂಭಾವನೆ ಬರೋಬ್ಬರಿ 1 ಕೋಟಿ ರೂಪಾಯಿ ಎಂದು showbizgalore ಹೇಳಿದೆ.
8/ 9
ಇದೀಗ ವಿಜಯ್ ಅಭಿಮಾನಿಗಳೆಲ್ಲ ಭೀಮಾ ಟೀಸರ್ಗಾಗಿ ಕುತೂಲದಿಂದ ಕಾಯುತ್ತಿದ್ದಾರೆ. ಅವರ ಸಿನಿಮಾ ಪ್ರೇಮಿಗಳು ಈ ಟೀಸರ್ ರಿಲೀಸ್ ಹಾಗೂ ಬರ್ತ್ಡೇಯನ್ನು ಗ್ರ್ಯಾಂಡ್ ಆಗಿ ಆಚರಿಸಲು ಪ್ಲಾನ್ ಮಾಡಿದ್ದಾರೆ.
9/ 9
ಭೀಮಾ ಸಿನಿಮಾಗಾಗಿ ನಟ ವಿಜಯ್ ಅವರು ದೇಹದ ತೂಕ ಇಳಿಸಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಕರಿನ ಹೊಸ ಅವತಾರ ಪ್ರೇಕ್ಷಕರ ಮುಂದೆ ಬರುತ್ತೆ ಎನ್ನುವುದರಲ್ಲಿ ನೋ ಡೌಟ್.