ಕನ್ನಡ ಚಿತ್ರರಂಗದಲ್ಲಿ ದೂದ್ ಪೇಡಾ ಎಂದೇ ಗುರುತಿಸಿಕೊಂಡಿರುವ ದಿಗಂತ್ ಜನಿಸಿದ್ದು 28 ಡಿಸೆಂಬರ್ 1983 ಸಾಗರದಲ್ಲಿ. ತಂದೆ ಕೃಷ್ಣಮೂರ್ತಿ ತಾಯಿ ಮಲ್ಲಿಕಾ ಕೃಷ್ಣಮೂರ್ತಿ.
2/ 8
ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಸಾಗರದಲ್ಲಿ. ನಂತರ ಇವರು ಬೆಂಗಳೂರಿನ ಶ್ರೀ ಭಗವನ್ ಮಹಾವೀರ್ ಜೈನ್ ಕಾಲೇಜ್ ನಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನಂತರ ಮಾಡಲಿಂಗ್ ಕ್ಷೇತ್ರಕ್ಕೆ ಪರಿಚಿತರಾದರು.
3/ 8
ಗಣೇಶ್ ರವರ ಮುಂಗಾರು ಮಳೆ ಚಿತ್ರದ ಪಾತ್ರ ಇವರಿಗೆ ಜನಪ್ರಿಯತೆ ತಂದುಕೊಟ್ಟಿತು. 2009 ರಲ್ಲಿ ಇವರು ಮನಸಾರೆ ಚಿತ್ರದ ಮೂಲಕ ನಾಯಕನಾಗಿ ಪರಿಚಿತರಾದರು.
4/ 8
ಇವರಿಗೆ ಕನ್ನಡ ಚಿತ್ರ ರಂಗದಲ್ಲಿ ಸುಮಾರು ಚಿತ್ರಗಳಿಗೆ ನಾಯಕನಾಗಿ ಅಭಿನಯಿಸುವ ಅವಕಾಶ ಸಿಕ್ಕವು. ಪಂಚರಂಗಿ, ಲೈಫು ಇಷ್ಟೇನೆ, ಪಾರಿಜಾತ, ಹೀಗೆ ಇನ್ನು ಹಲವು ಕನ್ನಡ ಚಿತ್ರರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
5/ 8
ತಾವು ನಾಯಕನಾಗಿ ನಟಿಸಿದ ಮನಸಾರೆ ಚಿತ್ರದ ನಾಯಕಿ ಐಂದ್ರಿತಾ ರೈ ರವರನ್ನು 2018 ಡಿಸೆಂಬರ್ 12 ರಂದು ವಿವಾಹವಾದರು. ಇಬ್ಬರು ಖುಷಿಯಿಂದ ತಮ್ಮ ಜೀವನ ಸಾಗಿಸುತ್ತಿದ್ದಾರೆ.
6/ 8
ಮತ್ತೆ ಇದೇ ವರ್ಷ ಗಾಳಿಪಟ 2 ನಲ್ಲಿ ದಿಗಂತ್ ಅವರು ತಮ್ಮ ಅಭಿನಯದ ಮೂಲಕ ಅಭಿನಿಗಳನ್ನು ರಂಜಿಸಿದ್ದಾರೆ. ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
7/ 8
2022 ಜೂನ್ ತಿಂಗಳಿನಲ್ಲಿ ಗೋವಾಕ್ಕೆ ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋದಾಗ, ಅಲ್ಲಿ ಸಮರ್ ಶಾಟ್ ಮಾಡುವಾಗ ತಮ್ಮ ಕುತ್ತಿಗೆಗೆ ಪೆಟ್ಟು ಬಿದ್ದು, ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಪಡೆದರು.
8/ 8
ಗೋವಾ ಅಪಘಾತಕ್ಕೂ ಮೊದಲು ವಿದೇಶದಲ್ಲಿ ಚಿತ್ರವೊಂದರ ಶೂಟಿಂಗ್ ಮಾಡುವಾಗ ದುರ್ಘಟನೆ ನೆಡೆದು, ಕಣ್ಣೊಂದಕ್ಕೆ ಹಾನಿ ಮಾಡಿಕೊಂಡಿದ್ದರು.