ದೀಕ್ಷಿತ್ ಶೆಟ್ಟಿ ಅವರು 1995 ಡಿಸೆಂಬರ್ 22ರಂದು ಜನಿಸಿದ್ದಾರೆ. ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಯುವ ನಟ. ಇವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಸೀರಿಯಲ್ ನಿಂದ ಖ್ಯಾತಿ ಪಡೆದರು.
2/ 8
ದಿಯಾ,ಸಾಗುತ ದೂರ ದೂರ ಚಿತ್ರಗಳಲ್ಲಿ ನಟಿಸಿದ್ದಾರೆ. 'ದಿಯಾ' ಚಿತ್ರದಿಂದ ದೊಡ್ಡಮಟ್ಟದಲ್ಲಿ ಗೆಲುವು ಸಾಧಿಸಿದ ನಟ ದೀಕ್ಷಿತ್ ಶೆಟ್ಟಿ. ದೀಕ್ಷಿತ್ ಶೆಟ್ಟಿಯನ್ನು ಹುಡುಕಿಕೊಂಡು ಹಲವು ಸಿನಿಮಾ ಅಫರ್ಗಳು ಬರುತ್ತಿವೆ.
3/ 8
ದಿಯಾ ಸಿನಿಮಾ ಆದ್ಮೇಲೆ ದೀಕ್ಷಿತ್ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ನಾಯಕ ನಟ ನಾನಿ ಅಭಿನಯದ ಪ್ಯಾನ್ ಇಂಡಿಯಾ ದಸರಾ ಚಿತ್ರದಲ್ಲೂ ಅಭಿನಯಿಸಿದ್ದಾರೆ.
4/ 8
ದೀಕ್ಷಿತ್ ಶೆಟ್ಟಿ ತಮ್ಮ ಸಿನಿ ಜರ್ನಿಯನ್ನ ಟಾಲಿವುಡ್ಗೂ ತೆಗೆದುಕೊಂಡು ಹೋಗಿರೋ ದೀಕ್ಷಿತ್, ಕನ್ನಡದ ಒಂದಷ್ಟು ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ.
5/ 8
ದೀಕ್ಷಿತ್ ಅಭಿನಯದ ಏಖಿಒ ಸಿನಿಮಾದಲ್ಲಿ ದೀಕ್ಷಿತ್ ಅಭಿನಯ ವಿಶೇಷವಾಗಿಯೇ ಇದೆ. ಪ್ರೀತಿ ಪ್ರೇಮದ ಕಥೆಯನ್ನೂ ಈ ಚಿತ್ರ ಹೊಂದಿದೆ. ಹಾಗಾಗಿಯೇ KTM ಸಿನಿಮಾದ ಸಬ್ ಟೈಟಲ್ ಅಷ್ಟೇ ವಿಶೇಷ ಕೂಡ ಅನಿಸುತ್ತದೆ.
6/ 8
ರೈಸ್ ಇನ್ ಲವ್ ಅನ್ನೋದೇ ಈ KTM ಸಿನಿಮಾದ ಸಬ್ ಟೈಟಲ್ ಆಗಿದೆ. ಲವ್ ಅಲ್ಲಿ ಬೀಳೋದು ಅನ್ನೋ ಮಾತು ಇದೆ. ಆದರೆ, ಇಲ್ಲಿ ರೈಸ್ ಇನ್ ಲವ್ ಅನ್ನೋ ಮೂಲಕ ಡೈರೆಕ್ಟರ್ Aruna ಪ್ರೀತಿಗೆ ಹೊಸ ಬರಹ ಬರೆದಂತೆ ಕಾಣುತ್ತಿದೆ.
7/ 8
'ದಿಯಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ರೀತಿಯ ಹೊಸ ಅಲೆ ಎಬ್ಬಿಸಿದ ನಟ ದೀಕ್ಷಿತ್ ಶೆಟ್ಟಿ ಕೊರೋನಾ ಲಾಕ್ಡೌನ್ನಿಂದ ತೀರಾ ಸಂಕಷ್ಟ ಅನುಭವಿಸಿದ್ದರು.
8/ 8
ಆರ್ಥಿಕವಾಗಿ ಸ್ಥಿರವಿಲ್ಲದ ಹೊಸ ಕಲಾವಿದರೂ 6 ತಿಂಗಳು ಏನೂ ಕೆಲಸವಿಲ್ಲದೆ ಮನೆಯಲ್ಲಿ ಕೂರುವುದು ಕಷ್ಟ ಎಂದು ದೀಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದರು.