ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಅವರು ಸದ್ಯ ಅವರ ಸಿನಿಮಾ ಜಮಾಲಿಗುಡ್ಡದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭ ನ್ಯೂಸ್ 18 ಕನ್ನಡ ಜೊತೆ ಮಾತನಾಡಿರುವ ನಟ ಕೆಲವು ವಿಶೇಷ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
2/ 7
ನಟ ಡಾಲಿ ಧನಂಜಯ್ ಅವರು ಅವರ ವನ್ಸ್ ಅಪೋನ್ ಎ ಟೈಂ ಘಟನೆಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟ ತಾವು ಮಾಡಿದ ಕಳ್ಳತನಗಳ ಬಗ್ಗೆ ಹೇಳಿದ್ದಾರೆ.
3/ 7
ಚಿಕ್ಕವರಿದ್ದಾಗ ಹುಡುಗರೆಲ್ಲ ಸುಬ್ರಹ್ಮಣ್ಯ ಜಾತ್ರೆಗೆ ಹೋಗಿದ್ದೆವು. ಅಲ್ಲಿ ಅಜ್ಜ ಒಬ್ರು ಸೀಬೆಹಣ್ಣು ಮಾರ್ತಿದ್ರು. ನಾವೆಲ್ಲ ಒಂದೊಂದು ಹಣ್ಣು ಎತ್ತಿಕೊಂಡು ಓಡಿದ್ದೆವು ಎಂದಿದ್ದಾರೆ.
4/ 7
ಆದರೆ ಈ ಸೀಬೆ ಹಣ್ಣು ಕದ್ದ ಮರುದಿನವೇ ಡಾಲಿ ಅವರಿಗೆ ಜೋರು ಜ್ವರ ಬಂದಿತ್ತಂತೆ. ಆಮೇಲೆ ಮನೆಯಲ್ಲಿ ವಿಷಯವನ್ನು ಹೇಳಿ ಎರಡು ರೂಪಾಯಿ ತೆಗೆದುಕೊಂಡು ದೇವರಹೊಂಡಿಗೆ ಹಾಕಿ ಇನ್ಮುಂದೆ ಕಳ್ಳತನ ಮಾಡಲ್ಲ ಎಂದಿದ್ದರಂತೆ ನಟ.
5/ 7
ಇನ್ನೊಂದು ಸಲ ಕಬಡ್ಡಿಗಾಗಿ ಶಾರ್ಟ್ಸ್ ಖರೀದಿಸಲು ಹೋಗಿದ್ದೆವು. ಆದರೆ ಶಾರ್ಟ್ಸ್ ಖರೀದಿಸಲು ಹೋಗಿ ಎರಡು ಶಾರ್ಟ್ಸ್ ಎಕ್ಸ್ಟಾ ತಗೊಂಡುಬಂದಿದ್ದೆವು ಎಂದಿದ್ದಾರೆ.
6/ 7
ನಂತರದಲ್ಲಿ ಪುನಃ ಜ್ವರ ಬಂದು ಅದನ್ನು ಮತ್ತೆ ಅಂಗಡಿಗೆ ಹೋಗಿ ವಾಪಸ್ ಕೊಟ್ಟಿದ್ದರು. ಆಮೇಲೆ ಅಲ್ಲಿಂದ ಪಡೆದ ಹಣದಲ್ಲಿ ಪಪ್ಸ್ ತಿಂದುಕೊಂಡು ವಾಪಾಸಾಗಿದ್ದರಂತೆ ನಟ.
7/ 7
ಡಾಲಿ ಅವರಿಗೆ ಕಳ್ಳತನ ಮಾಡಿದ್ರೆ ಜ್ವರ ಬರುತ್ತಂತೆ. ಆ ಸಲ ಮತ್ತೊಮ್ಮೆ ದೇವರಲ್ಲಿ ಇನ್ಮುಂದೆ ಕಳ್ಳತನ ಮಾಡಲ್ಲ ಎಂದು ಹೇಳಿ ಆಮೇಲೆ ಯಾವತ್ತೂ ಕಳ್ಳತನ ಮಾಡಿಲ್ಲವಂತೆ ಧನಂಜಯ್.