ಡಾಲಿ ಧನಂಜಯ ಅವರ ಬಹು ನಿರೀಕ್ಷಿತ ಚಿತ್ರ ಹೆಡ್ ಬುಷ್ ಅಕ್ಟೋಬರ್ 21 ರಂದು ರಿಲೀಸ್ ಆಗಿತ್ತು. ಸಿನಿಮಾ ನೋಡಿ ಜನ ಮೆಚ್ಚಿಕೊಂಡಿದ್ದರು ಆ ಸಿನಿಮಾ ಈಗ ಜೀ5 ಒಟಿಟಿಯಲ್ಲಿ ಬರಲಿದೆ.
2/ 8
ಜನವರಿ 13 ರಂದು ಜೀ5 ಒಟಿಟಿಯಲ್ಲಿ ಹೆಡ್ ಬುಷ್ ಸಿನಿಮಾ ಬಿಡುಗಡೆಯಾಗುತ್ತಿದೆ. ಅಗ್ನಿ ಶ್ರೀಧರ್ ಬರೆದ ಪುಸ್ತಕ ಆಧರಿಸಿದ ಈ ಚಿತ್ರ ಶೂನ್ಯ ಅವರ ನಿರ್ದೇಶನದಲ್ಲಿ ಮೂಡಿ ಬಂದಿದೆ.
3/ 8
ತೆರೆ ಮೇಲೆ 70ರ ದಶಕದ ಭೂಗತ ಜಗತ್ತನ್ನು ಕಟ್ಟಿಕೊಟ್ಟಿತ್ತು. ಎಂ.ಪಿ.ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ ಅಭಿನಯಿಸಿದ್ರು. ಡಾಲಿ ನಟನೆಯನ್ನು ಎಲ್ಲಾರು ಇಷ್ಟ ಪಟ್ಟಿದ್ದರು.
4/ 8
ಅಲ್ಲದೇ ಹೆಡ್ ಬುಷ್ ಸಿನಿಮಾಕ್ಕೆ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದರು. ಸಿನಿಮಾವನ್ನು ಚಿತ್ರಮಂದಿರದಲ್ಲಿ ಮಿಸ್ ಮಡಿಕೊಂಡವರು ಮನೆಯಲ್ಲಿ ಜೀ 5 ಒಟಿಟಿಯಲ್ಲಿ ನೋಡಬಹುದು.
5/ 8
ಹೆಡ್ ಬುಷ್ ಸಿನಿಮಾದ ಟ್ರೇಲರ್ನಲ್ಲಿ ಎಂ.ಪಿ.ಜಯರಾಜ್ ಅವರನ್ನು ಕೆಟ್ಟ ವ್ಯಕ್ತಿಯಂತೆ ಬಿಂಬಿಸಿದ್ದಾರೆ. ನಮ್ಮ ತಂದೆ ಬಡವರ ಹಾಗೂ ಧ್ವನಿ ಇಲ್ಲದವರ ಪರವಾಗಿ ಹೋರಾಡಿದವರು ಎಂದು ಅಜಿತ್ ಜಯರಾಜ್ ಹೇಳಿದ್ದರು.
6/ 8
ನಮ್ಮ ಅಪ್ಪ ಪೊಲೀಸ್ ವ್ಯವಸ್ಥೆಯಲ್ಲಿನ ಅಕ್ರಮವನ್ನು ವಿರೋಧಿಸಿದವರು. ಕುಟುಂಬಸ್ಥರ ಅನುಮತಿ ಪಡೆಯದೇ ತಂದೆಯವರ ಜೀವನಾಧಾರಿತ ಕಥೆಯನ್ನ ಚಿತ್ರ ಮಾಡಲು ಹೊರಟ್ಟಿದ್ದಾರೆ ಎಂದು ಅಜಿತ್ ಜಯರಾಜ್ ಆರೋಪಿಸಿದ್ದರು.
7/ 8
ಹೆಡ್ ಬುಷ್ ಸಿನಿಮಾದಲ್ಲಿ ಇಂದಿರಾ ಗಾಂಧಿಯವರ ಇಂದಿರಾ ಬ್ರಿಗೇಡ್ ಪ್ರಮುಖ ಅಂಶವೇ ಆಗಿದೆ. ಇಡೀ ಕಥೆಯ ಚಿತ್ರ ಓಡಲು ಅದುವೇ ಕಾರಣವೂ ಆಗಿದೆ.
8/ 8
ಜಯರಾಜ್ ಎಂಬ ಪೊಲೀಸ್ ವಿರೋಧಿ ಪೈಲ್ವಾನ್ ಹೇಗೆಲ್ಲ ರಾಜಕೀಯ ದಾಳಕ್ಕೆ ಬಳಕೆ ಆಗಿದ್ದಾನೆ ಅನ್ನೋದು ಇಲ್ಲಿ ಸ್ಪಷ್ಟವಾಗಿಯೇ ಅರ್ಥವಾಗುತ್ತದೆ. ಮನೆಯಲ್ಲಿ ಕೂತು ಸಿನಿಮಾ ನೋಡಿ ಎಂಜಾಯ್ ಮಾಡಿ.