ಪುಷ್ಟ ಸಿನಿಮಾದಲ್ಲಿ ಡಾಲಿಗೆ ತಕ್ಕಂತಹ ನಿರ್ಣಾಯಕ ಪಾತ್ರವೊಂದಿದೆಯಂತೆ. ಈ ಹಿಂದೆ ಬಾಬ್ಬಿ ಸಿಂಹ ಮತ್ತು ರಾಜ್ ದೀಪಕ್ ಶೆಟ್ಟಿ ಅವರ ಹೆಸರುಗಳು ಕೇಳಿ ಬಂದಿದ್ದವು. ಆದರೀಗ ಧನಂಜಯ್ ಹೆಸರನ್ನು ಚಿತ್ರತಂಡ ಅಂತಿಮಗೊಳಿಸಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಮತ್ತೊಂದೆಡೆ ಡಾಲಿಯೇ ಈ ಪಾತ್ರಕ್ಕೆ ಸೂಕ್ತರಾದವರು ಎಂದು ಚಿತ್ರತಂಡ ಮಾತನಾಡಿಕೊಳ್ಳುತ್ತಿದ್ದಾರಂತೆ. ಆದರೆ ಈ ಸುದ್ದಿ ನಿಜವೇ? ಡಾಲಿಗೆ ಇಂತದೊಂದು ಆಫರ್ ಬಂದಿದೆಯೇ? ಎಂಬುದು ಲಾಕ್ ಡೌನ್ ಮುಗಿದ ನಂತರ ಗೊತ್ತಾಗಲಿದೆ.