Kichcha Sudeep: ಇಬ್ರೂ ಜೂಜಿನ ಜಾಹೀರಾತಿನಿಂದಲೇ ಹಣ ಗಳಿಸಿದವ್ರು! ಕಿಚ್ಚನಿಗೆ ಟಾಂಗ್ ಕೊಟ್ಟ ನಟ ಚೇತನ್

ಸ್ಯಾಂಡಲ್​ವುಡ್ ನಟ ಚೇತನ್ ಯಾವುದೇ ಬೆಳವಣಿಗೆ ನಡೆದಾಗಲೂ ಪ್ರತಿಕ್ರಿಯಿಸುತ್ತಾರೆ. ಈಗ ಕಿಚ್ಚ ಸುದೀಪ್ ಹಾಗೂ ಪ್ರಕಾಶ್ ರಾಜ್ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

First published:

  • 17

    Kichcha Sudeep: ಇಬ್ರೂ ಜೂಜಿನ ಜಾಹೀರಾತಿನಿಂದಲೇ ಹಣ ಗಳಿಸಿದವ್ರು! ಕಿಚ್ಚನಿಗೆ ಟಾಂಗ್ ಕೊಟ್ಟ ನಟ ಚೇತನ್

    ಸ್ಯಾಂಡಲ್​ವುಡ್ ನಟ ಚೇತನ್ ಆಗಾಗ ಒಂದೊಂದು ವಿವಾದಾತ್ಮಕ ಹೇಳಿಕೆ ಕೊಡುತ್ತಲೇ ಇರುತ್ತಾರೆ. ಇದೇನು ಹೊಸದಲ್ಲ. ಯಾವುದೇ ಬೆಳವಣಿಗೆ ನಡೆದಾಗಲೂ ಚೇತನ್ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ. ಅವರ ಅಭಿಪ್ರಾಯ ಹಾಗೂ ಮಾತುಗಳು ಹಲವು ಬಾರಿ ವಿವಾದಕ್ಕೆ ದಾರಿ ಮಾಡಿಕೊಡುತ್ತದೆ.

    MORE
    GALLERIES

  • 27

    Kichcha Sudeep: ಇಬ್ರೂ ಜೂಜಿನ ಜಾಹೀರಾತಿನಿಂದಲೇ ಹಣ ಗಳಿಸಿದವ್ರು! ಕಿಚ್ಚನಿಗೆ ಟಾಂಗ್ ಕೊಟ್ಟ ನಟ ಚೇತನ್

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಿಎಂ ಬೊಮ್ಮಾಯಿಗೆ ಬೆಂಬಲ ಘೋಷಿಸಿದ ನಂತರ ಸಾಕಷ್ಟು ಚರ್ಚೆಗಳಾಗುತ್ತಿವೆ. ನಟ ಪ್ರಕಾಶ್ ರೈ ಅವರಂತೂ ಕಿಚ್ಚ ತಮ್ಮನ್ನು ತಾವು ಮಾರಿಕೊಳ್ಳುವವರಲ್ಲ ಎಂದಿದ್ದರು. ಆಮೇಲೆ ಕಿಚ್ಚನ ಹೇಳಿಕೆ ಕೇಳಿ ನನಗೆ ಶಾಕ್ ಆಗಿದೆ ಹಾಗೆಯೇ ಬೇಜಾರಗಿದೆ ಎಂದಿದ್ದರು.

    MORE
    GALLERIES

  • 37

    Kichcha Sudeep: ಇಬ್ರೂ ಜೂಜಿನ ಜಾಹೀರಾತಿನಿಂದಲೇ ಹಣ ಗಳಿಸಿದವ್ರು! ಕಿಚ್ಚನಿಗೆ ಟಾಂಗ್ ಕೊಟ್ಟ ನಟ ಚೇತನ್

    ಕಿಚ್ಚ ಬೊಮ್ಮಾಯಿಗೆ ಬೆಂಬಲ ಸೂಚಿಸಿದ ನಂತರ ಪ್ರಕಾಶ್ ರೈ ಸರಣಿ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ ಕೂಡಾ ವೈರಲ್ ಆಗಿದೆ. ಇದೀಗ ಇಬ್ಬರು ನಟರಿಗೂ ಚೇತನ್ ಅಹಿಂಸಾ ಟಾಂಗ್ ನೀಡಿದ್ದಾರೆ. ನಟ ಏನಂದಿದ್ದಾರೆ ಗೊತ್ತೇ?

    MORE
    GALLERIES

  • 47

    Kichcha Sudeep: ಇಬ್ರೂ ಜೂಜಿನ ಜಾಹೀರಾತಿನಿಂದಲೇ ಹಣ ಗಳಿಸಿದವ್ರು! ಕಿಚ್ಚನಿಗೆ ಟಾಂಗ್ ಕೊಟ್ಟ ನಟ ಚೇತನ್

    ಇಬ್ಬರೂ ಪ್ರತಿಭಾವಂತ ನಟರು. ಒಬ್ಬರು ಬಿಜೆಪಿ ಪರ ಮತ್ತೊಬ್ಬರು ಬಿಜೆಪಿ ವಿರೋಧಿ. ಇಬ್ಬರು ಕೂಡಾ ಜೂಜಿನ ಜಾಹೀರಾತುಗಳ ಮೂಲಕ ಹೆಚ್ಚು ಹಣವನ್ನು ಗಳಿಸಿದ್ದಾರೆ ಎಂದು ಇಬ್ಬರನ್ನು ತರಾಟೆ ತೆದುಕೊಂಡಿದ್ದಾರೆ ನಟ ಚೇತನ್.

    MORE
    GALLERIES

  • 57

    Kichcha Sudeep: ಇಬ್ರೂ ಜೂಜಿನ ಜಾಹೀರಾತಿನಿಂದಲೇ ಹಣ ಗಳಿಸಿದವ್ರು! ಕಿಚ್ಚನಿಗೆ ಟಾಂಗ್ ಕೊಟ್ಟ ನಟ ಚೇತನ್

    ಮತ್ತೊಂದು ಪೋಸ್ಟ್‌ನಲ್ಲಿ ಚೇತನ್ ಸಿನಿಮಾ ತಾರೆಯೊಬ್ಬರು ಬಿಜೆಪಿ ಪಕ್ಷಕ್ಕೆ ಸೇರಿದರೆ ಉದಾರವಾದಿಗಳು ಅದನ್ನು ‘ಮಾರಾಟ’ ಎಂದು ಯಾಕೆ ಹೇಳುತ್ತಾರೆ? ಈ ಉದಾರವಾದಿಗಳು ಈಗಾಗಲೇ ಕಾಂಗ್ರೆಸ್‌/ಜೆಡಿಎಸ್/ಎಎಪಿ ಅಂತಹ ವ್ಯವಸ್ಥಿತ ರಾಜಕೀಯ ಹಿಂದೂ ಶಕ್ತಿಗಳಿಗೆ 'ಮಾರಾಟ' ಆಗಿದ್ದಾರೆ ಎಂದು ಪ್ರಕಾಶ್ ರಾಜ್ ಅವರಿಗೆ ಟಾಂಗ್ ನೀಡಿದ್ದಾರೆ.

    MORE
    GALLERIES

  • 67

    Kichcha Sudeep: ಇಬ್ರೂ ಜೂಜಿನ ಜಾಹೀರಾತಿನಿಂದಲೇ ಹಣ ಗಳಿಸಿದವ್ರು! ಕಿಚ್ಚನಿಗೆ ಟಾಂಗ್ ಕೊಟ್ಟ ನಟ ಚೇತನ್

    ಬಿಜೆಪಿ ಮಾತ್ರ ಶತ್ರು ಎಂದು ಹೇಳುವವರು ಕೂಡ ನಮ್ಮ ಶತ್ರುಗಳು. ನಾವು ಅನ್ಯಾಯದ ಮತ್ತು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯ ವಿರುದ್ಧ ಹೋರಾಡಬೇಕು ಎಂದು ಚೇತನ್ ಬರೆದುಕೊಂಡಿದ್ದಾರೆ.

    MORE
    GALLERIES

  • 77

    Kichcha Sudeep: ಇಬ್ರೂ ಜೂಜಿನ ಜಾಹೀರಾತಿನಿಂದಲೇ ಹಣ ಗಳಿಸಿದವ್ರು! ಕಿಚ್ಚನಿಗೆ ಟಾಂಗ್ ಕೊಟ್ಟ ನಟ ಚೇತನ್

    ಸುದೀಪ್ ಅವರು ಬಸವರಾಜ್ ಬೊಮ್ಮಾಯಿ ಅವರೊಂದಿಗಿನ ಆತ್ಮೀಯತೆಯಿಂದ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಕಿಚ್ಚ ಅವರು ಬೊಮ್ಮಾಯಿ ಹೇಳಿದಲ್ಲಿ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ.

    MORE
    GALLERIES