Arjun Gowda: ಕೊರೋನಾ ಸೋಂಕಿತರಿಗಾಗಿ ಆಂಬ್ಯುಲೆನ್ಸ್ ಚಾಲಕನಾದ ಸ್ಯಾಂಡಲ್ವುಡ್ ನಟ
ಕೊರೋನಾ ಎರಡನೇ ಅಲೆ (corona Second wave) ಇಡೀ ದೇಶದಲ್ಲಿ ಆತಂಕ ಸೃಷ್ಟಿಸಿದೆ. ಹೆಚ್ಚುತ್ತಿರುವ ಸೋಂಕಿತರ ಹಾಗೂ ಸಾವಿನ ಸಂಖ್ಯೆಯಿಂದಾಗಿ ಜನ ಕಂಗಾಲಾಗಿದ್ದಾರೆ. ಸಾಕಷ್ಟು ಮಂದಿ ಸ್ವಯಂಪ್ರೇರಿತರಾಗಿ ಕೊರೋನಾ ವಾರಿಯರ್ಸ್ ಆಗಿ ಸೇವೆ ಮಾಡುತ್ತಿದ್ದಾರೆ. ಅಂತೆಯೇ ಸ್ಯಾಂಡಲ್ವುಡ್ ನಟ ಅರ್ಜುನ್ ಗೌಡ (Arjun Gowda) ಸಹ ಕೊರೋನಾ ಸೋಂಕಿತರಿಗೆ ನೆರವಾಗಲೆಂದು ಆಂಬ್ಯುಲೆನ್ಸ್ ಡ್ರೈವರ್ (Ambulance Driver) ಆಗಿ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. (ಚಿತ್ರಗಳು ಕೃಪೆ: ಅರ್ಜುನ್ ಗೌಡ ಇನ್ಸ್ಟಾಗ್ರಾಂ ಖಾತೆ)
ಕೊರೋನಾ ಮೊದಲ ಅಲೆ ಆರಂಭವಾದಾಗ ಸದಾಕಷ್ಟು ಮಂದಿ ಸಿನಿ ಸ್ಟಾರ್ಗಳು ಸಂಕಷ್ಟದಲ್ಲಿದ್ದವರಿಗೆ ಆಹಾರ ಧಾನ್ಯ ಹಾಗೂ ಊಟ ತಲುಪಿಸುವ ಕೆಲಸ ಮಾಡಿದ್ದರು. ಮತ್ತೆ ಕೆಲವರು ಅಗತ್ಯ ಔಷಧಿಗಳನ್ನು ವಿತರಿಸುವ ಕಾರ್ಯ ಮಾಡಿದ್ದರು.
2/ 10
ಎರಡನೇ ಅಲೆ ಆರಂಭವಾದಾಗಿನಿಂದ ಸ್ಯಾಂಡಲ್ವುಡ್ ನಟ ಅರ್ಜುನ್ ಗೌಡ ಅವರು ಆಂಬ್ಯುಲೆನ್ಸ್ ಚಾಲಕನಾಗಿ ಕೊರೋನಾ ಸೋಂಕಿತರಿಗೆ ನೆರವಾಗುತ್ತಿದ್ದಾರೆ.
3/ 10
ರುಸ್ತುಂ ಹಾಗೂ ಯುವರತ್ನ ಸಿನಿಮಾಗಳಲ್ಲಿ ನಟಿಸಿರುವ ಅರ್ಜುನ್ ಗೌಡ ಸದ್ಯ ಆಂಬ್ಯುಲೆನ್ಸ್ ಚಾಲಕರಾಗಿ ಸಂಕಷ್ಟದಲ್ಲಿರುವ ಕೊರೋನಾ ರೋಗಿಗಳನ್ನು ಆಸ್ಪತ್ರೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
4/ 10
ಸೋಂಕಿತರನ್ನು ಆಸ್ಪತ್ರೆಗೆ ತಲುಪಿಸುವುದರೊಂದಿಗೆ ಅರ್ಜುನ್, ಮೃತರ ಅಂತ್ಯಕ್ರಿಯೆಗೂ ನೆರವಾಗುತ್ತಿದ್ದಾರೆ.
5/ 10
ಅರ್ಜುನ್ ಗೌಡ ಮಾಡುತ್ತಿರುವ ಕೆಲಸ ನೋಡಿದ ರಕ್ಷಿತಾ ಮೆಚ್ಚಿಗೆ ಸೂಚಿಸುತ್ತಾ ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
6/ 10
ಸದ್ಯ ಅರ್ಜುನ್ ಗೌಡ ಮಾಡುತ್ತಿರುವ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
7/ 10
ಅರ್ಜುನ್ ಗೌಡ ನಿತ್ಯ ಪಿಪಿಇ ಕಿಟ್ ಧರಿಸಿ ಆಂಬ್ಯುಲೆನ್ಸ್ ಹತ್ತಿ ಸೋಂಕಿತರಿಗೆ ಸಹಾಯ ಮಾಡಲು ಹೊರಡುತ್ತಾರೆ.
8/ 10
ಅರ್ಜುನ್ ಗೌಡ ತಮ್ಮ ಆಂಬುಲೆನ್ಸ್ ಜೊತೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
9/ 10
ಕಳೆದ 3 ದಿನಗಳಿಂದ ಆಂಬ್ಯುಲೆನ್ಸ್ ಚಾಲಕನಾಗಿ ಸೇವೆ ಸಲ್ಲಿಸುತ್ತಿರುವ ಅರ್ಜುನ್ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
10/ 10
ಕೊರೋನಾದಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರಕ್ಕೆ ನೆರವಾಗುತ್ತಿರುವ ನಟ 20ಕ್ಕೂ ಹೆಚ್ಚು ಶವಗಳ ಅಂತ್ಯಕ್ರಿಯೆಗೆ ಸಹಾಯಕ ಮಾಡಿದ್ದಾರೆ.