ಇದೀಗ ಕೋಮಲ್ ಮತ್ತೆ ಕಾಮಿಡಿ ಟ್ರಾಕ್ಗೆ ಮರಳಿದ್ದಾರೆ. ನಿರ್ಮಾಪಕ ಟಿ. ಆರ್ ಚಂದ್ರಶೇಖರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಕೋಮಲ್ ಕಾಮಿಡಿಯನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಾಮಿಡಿಯನ್ ಆಗಿ ಪ್ರೇಕ್ಷಕರನ್ನು ಮನರಂಜಿಸಿದ್ದ ನಟ ಕೋಮಲ್ ನಾಯಕನಾಗಿಯೂ ಅಬ್ಬರಿಸಿದ್ದಾರೆ.
2/ 9
ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದ್ದ ಕೋಮಲ್ 2016ರಲ್ಲಿ ‘ಡೀಲ್ ರಾಜ’ ಸಿನಿಮಾದ ನಂತರ ಕೊಂಚ ಬ್ರೇಕ್ ತೆಗೆದುಕೊಂಡರು. ಅದಾದ ಬಳಿಕ ಕಳೆದ ವರ್ಷ ‘ ಕೆಂಪೇಗೌಡ 2’ ಸಿನಿಮಾ ಮೂಲಕ ಕಾಣಿಸಿಕೊಂಡರು.
3/ 9
ಇದೀಗ ಕೋಮಲ್ ಮತ್ತೆ ಕಾಮಿಡಿ ಟ್ರಾಕ್ಗೆ ಮರಳಿದ್ದಾರೆ. ನಿರ್ಮಾಪಕ ಟಿ. ಆರ್ ಚಂದ್ರಶೇಖರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಕೋಮಲ್ ಕಾಮಿಡಿಯನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
4/ 9
ಟಿ ಆರ್ ಚಂದ್ರಶೇಖರ್ ‘ಚಮಕ್‘, ‘ಅಯೋಗ್ಯ’ ಸೇರಿದಂತೆ ಹಲವು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಹಾಗಾಗಿ ಇದೀಗ ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿರುವ ಚಂದ್ರಶೇಖರ್ ಅವರು ಕೋಮಲ್ ಅವರನ್ನು ಹಾಕಿಕೊಂಡು ಪ್ರೇಕ್ಷಕರನ್ನು ನಗಿಸಲಿದ್ದಾರೆ.
5/ 9
ಈಗಾಗಲೇ ಮಾತುಕತೆ ಮುಗಿದಿದ್ದು, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ನಡಿ ಸಿನಿಮಾ ಬರಲಿದೆ. ಆದರೆ ಈ ಸಿನಿಮಾ ಹೆಸರು ಇನ್ನು ಬಹಿರಂಗಗೊಂಡಿಲ್ಲ.
6/ 9
ಇನ್ನು ದರ್ಶನ್ ನಟನೆಯ ‘ರಾಬರ್ಟ್‘ ಸಿನಿಮಾ ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ರಾಜಶೇಖರ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.
7/ 9
ಇನ್ನು ಈ ಬಗ್ಗೆ ಮಾತನಾಡಿದ್ದ ರಾಜಶೇಖರ್, ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಹಾಸ್ಯ ಸಿನಿಮಾ ಮಾಡಲು ಕಥೆ ಹುಡುಕುತ್ತಿದ್ದರು. ಆಗ ನಾನೊಂದು ಕಥೇ ಹೇಳಿದೆ. ಇದೇ ಕಥೆಯನ್ನೀಗ ಸಿನಿಮಾ ಮಾಡುತ್ತಿದ್ದೇವೆ. ಕೋಮಲ್ ಈ ಸಿನಿಮಾಗೆ ಸೂಕ್ತ ಎನಿಸಿತು. ಅವರಿಗೆ ಕಥೇ ಹೇಳೀದಾಗ ಒಪ್ಪಿಕೊಂಡರು.
8/ 9
ನಂತರ ಮಾತು ಮುಂದುವರಿಸಿದ ಅವರು ಚಿತ್ರಕಥೆ ಪೂರ್ಣಗೊಂಡಿದ್ದು, ಸಂಭಾಷಣೆ ಬರೆಯುತ್ತಿದ್ದೇನೆ, ಈ ಸಿನಿಮಾದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಲಿದೆ. ಅಕ್ಟೋಬರ್ನಲ್ಲಿ ಈ ಸಿನಿಮಾ ಶೂಟಿಂಗ್ ಮಾಡಲಿದ್ದೇವೆ ಎಂದರು
9/ 9
ಇನ್ನು ಕೋಮಲ್ ಕಾಮಿಡಿ ಮಾಡುವ ಮೂಲಕ ಮತ್ತೆ ಸ್ಕ್ರೀನ್ ಬರಲು ಸಜ್ಜಾಗಿದ್ದಾರೆ. ಅಭಿಮಾನಿಗಳೂ ಕೂಡ ನೆಚ್ಚಿನ ನಟನ ನಟನೆಯನ್ನು ನೋಡಲು ಕಾತುರರಾಗಿದ್ದಾರೆ