2023ರ 'ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ'ಯನ್ನು ಹಿರಿಯ ನಟ ಅನಂತನಾಗ್ ಅವರಿಗೆ ನೀಡಲು ಮಂಡಳಿ, ನಾಟ್ಯೋತ್ಸವ ಸಲಹಾ ಸಮಿತಿ ಮತ್ತು ಪ್ರಶಸ್ತಿ ಆಯ್ಕೆ ಸಮಿತಿ ನಿರ್ಧಾರ ಮಾಡಲಾಗಿದೆ.
2/ 8
ನಿರ್ದೇಶಕರಾದ ದಿವಂಗತ ಕೆರೆಮನೆ ಶಂಭು ಹೆಗಡೆಯವರು ಯಕ್ಷಗಾನ ರಂಗಭೂಮಿಗೆ ನೀಡಿದ ಕೊಡುಗೆ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತೆ. 12 ವರ್ಷಗಳಿಂದ ರಾಷ್ಟ್ರೀಯ ನಾಟ್ಯೋತ್ಸವನ್ನು ಆಚರಿಸುತ್ತಾ ಬಂದಿದ್ದಾರೆ.
3/ 8
ಹೊನ್ನಾವರದ ಕೆರೆಮನೆ ಶಿವರಾಮ ಹೆಗಡೆ ಹೆಸರಿನಲ್ಲಿ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ವಾರ್ಷಿಕವಾಗಿ ಪ್ರಶಸ್ತಿ ನೀಡಲಾಗುವುದು.
4/ 8
ಈ ಬಾರಿ ಈ ಪ್ರಶಸ್ತಿಗೆ ಚಲನಚಿತ್ರ ಹಿರಿಯ ನಟ ಅನಂತ್ ನಾಗ್ ಆಯ್ಕೆ ಆಗಿದ್ದಾರೆ. ಈ ಪ್ರಶಸ್ತಿಯೂ 25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಮತ್ತು ಇತರ ಗೌರವಗಳನ್ನು ಒಳಗೊಂಡಿದೆ.
5/ 8
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-13 ಫೆಬ್ರವರಿ 03 ರಿಂದ 07 ರವರೆಗೆ ಐದು ದಿನಗಳ ಕಾಲ ಹೊನ್ನಾವರ ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಜರುಗಲಿದೆ.
6/ 8
ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ದೇಶದ ಕಲಾ ಪರಿಣಿತರು, ಚಿಂತಕರು, ಭಾಗವಹಿಸಲಿದ್ದಾರೆ. ಈ ನಾಟ್ಯೋತ್ಸವದಲ್ಲಿ ಕಲಾವಿದರಿಗೆ ಸನ್ಮಾನ, ವಿಚಾರ ಗೋಷ್ಠಿ, ನೃತ್ಯ ಮುಂತಾದವು ನಡೆಯಲಿದೆ.
7/ 8
ದಿವಂಗತ ಕೆರೆಮನೆ ಶಂಭು ಹೆಗಡೆಯವರು ಸಂಘಟಕರಾಗಿ, ಕಲಾವಿದರಾಗಿ, ಚಿಂತಕರಾಗಿ, ಕಲೆಗಾಗಿ ಬದುಕಿದವರು. ಯಕ್ಷಗಾನಕ್ಕಾಗಿ ತನ್ನ ಬದುಕನ್ನು ಸಮರ್ಪಿಸಿಕೊಂಡವರು. ದೇಶ, ವಿದೇಶಗಳಲ್ಲಿ ಕಲೆಯನ್ನು ಮೆರೆಸಿ, ರಾಜ್ಯ, ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿ ಯಕ್ಷಗಾನ ತರಬೇತಿ ಕೇಂದ್ರ ರಂಗಮಂದಿರ ನಿರ್ಮಿಸಿದರು.
8/ 8
ಈ ಬಾರಿ ಪ್ರಶಸ್ತಿಯು ನಟ ಅನಂತ್ನಾಗ್ ಅವರಿಗೆ ಲಭಿಸಿರುದು ತುಂಬಾ ಖುಷಿ ಆಗಿದೆ ಎಂದು ಕಲಾಭಿಮಾನಿಗಳು ಹೇಳಿದ್ದಾರೆ. ಒಳ್ಳೆಯದಾಗಲಿ ಅಂತ ವಿಶ್ ಮಾಡಿದ್ದಾರೆ.