Happy Birthday Samyukta: ಸಂಯುಕ್ತಾ ಹೊರನಾಡು(ಬೆಳವಾಡಿ) ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕಲಾವಿದರ ಕುಟುಂಬದ ಕುಡಿಯ ಜನ್ಮದಿನ ಇಂದು. ಇವರ ಬಗ್ಗೆ ತಿಳಿಯದ ಕೆಲ ಸಂಗತಿಗಳು ಇಲ್ಲಿದೆ.
ಸುಧಾ ಬೆಳವಾಡಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಹೆಚ್ಚು ಪ್ರಸಿದ್ದ ನಟಿ, ಸರಳ ಹಾಗೂ ಸಹಜ ಅಭಿನಯದ ಮೂಲಕ ಮನೆಮಾತಾದವರು. ಅವರ ಮಗಳು ಸಂಯುಕ್ತಾ ಹೊರನಾಡು, ಕಲಾವಿದರ ಕುಟುಂಬದ ಕುಡಿ ಎನ್ನಬಹುದು.
2/ 8
ಈ ಸುಂದರಿ ದೂದ್ ಪೇಡಾ ದಿಗಂತ್ ಅಭಿನಯದ ಲೈಫು ಇಷ್ಟೇನೆ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶ ಪಡೆದವರು. ಮೊದಲ ಚಿತ್ರದಲ್ಲಿಯೇ ಜನರಿಗೆ ಮೋಡಿ ಮಾಡಿದವರು.
3/ 8
ಮೊದಲ ಚಿತ್ರದಲ್ಲಿ ತುಂಟ ಹುಡುಗಿಯ ಪಾತ್ರದಲ್ಲಿ ನಟಿಸಿದ ಅವರು, ಸಿರೀಯಸ್ ಪಾತ್ರಗಳನ್ನು ಸಹ ಮಾಡಿ, ಯಾವುದಕ್ಕೂ ಕಮ್ಮಿ ಇಲ್ಲ ತೋರಿಸಿದವರು.
4/ 8
ತಮ್ಮ ಮುಗ್ಧ ಅಭಿನಯದ ಮೂಲಕ ಜನರಿಗೆ ಇಷ್ಟವಾದ ಈ ನಟಿ ನಂತರ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಸಿದ್ದಾರೆ. ನಂತರ ಬರ್ಫಿ, ಒಗ್ಗರಣೆ ಚಿತ್ರದಲ್ಲಿ ಅಭಿನಯಿಸಿದ್ದಾರೆ.
5/ 8
ಇನ್ನು ಒಗ್ಗರಣೆ ಚಿತ್ರದ ನಟನೆಗೆ ಫಿಲ್ಮ್ಫೇರ್ನ ಬೆಸ್ಟ್ ಸಪೋರ್ಟಿಂಗ್ ನಟಿ ಎಂಬ ಪ್ರಶಸ್ತಿಯನ್ನು ಸಹ ಪಡೆವರು. ಇದರ ನಂತರ ಸಂಯುಕ್ತಾ ಸ್ಯಾಂಡಲ್ವುಡ್ನ ಬ್ಯುಸಿ ನಟಿಯರಲ್ಲಿ ಒಬ್ಬರಾದರು.
6/ 8
ಕಾಫಿತೋಟ, ನೀನೇ ಬರಿ ನೀನೇ, ಜಿಗರ್ಥಂಡಾ, ಸರ್ಕಾರಿ ಕೆಲಸ ದೇವರ ಕೆಲಸ, ಮಾರಿಕೊಂಡವರು, ದಯವಿಟ್ಟು ಗಮನಿಸಿ, ತ್ರಾಯ, ನಾನು ಮತ್ತು ಗುಂಡ ಹೀಗೆ ಸಂಯುಕ್ತಾ ಒಂದರ ನಂತರ ಒಮದು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
7/ 8
ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಸಹ ಸಂಯುಕ್ತಾ ಅಭಿನಯಿಸಿದ್ದು, ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
8/ 8
ಇನ್ನು ಸಿನೆಮಾ ಮಾತ್ರವಲ್ಲದೇ ವೆಬ್ ಸೀರಿಸ್ಗಳಲ್ಲಿ ಸಹ ಸಂಯುಕ್ತಾ ಬ್ಯುಸಿ ಇದ್ದು, ಸದ್ಯ ವಿಶೇಷ ದಿನವನ್ನು ಜಾಲಿಯಾಗಿ ಕಳೆಯುತ್ತಿದ್ದಾರೆ. ನಮ್ಮ ಕಡೆಯಿಂದ ಸಹ ಜನ್ಮದಿನದ ಶುಭಾಷಯಗಳು.