ಕೊರೋನಾದಿಂದಾಗಿ ಮುಚ್ಚಿದ್ದ ಚಿತ್ರಮಂದಿರಗಳು 2022ರಲ್ಲಿ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ತೆರೆಯಲ್ಪಟ್ಟಿತು. ದೊಡ್ಡ ದೊಡ್ಡ ಸಿನಿಮಾಗಳು ಸಹ ಬಿಗ್ ಸ್ಕ್ರೀನ್ನಲ್ಲಿ ಬಿಡುಗಡೆಯಾಗಿವೆ. ಕೆಲವು OTTಯಲ್ಲಿ ಬಂದಿತು. ಆದರೆ ಈ ಕೆಲವು ಸಿನಿಮಾಗಳ ವಿಚಾರದಲ್ಲಿ ನಿರ್ಮಾಪಕರು ಮತ್ತು ನಟರ ನಿರೀಕ್ಷೆ ನಿಜವಾಗಲಿಲ್ಲ. ಈ ಪಟ್ಟಿಯಲ್ಲಿ ರಣವೀರ್ ಸಿಂಗ್ನಿಂದ ಹಿಡಿದು ಅಕ್ಷಯ್ ಕುಮಾರ್ವರೆಗಿನ ನಟರ ಸಿನಿಮಾಗಳ ಹೆಸರುಗಳಿವೆ. ಈ ಬಾರಿ ಅನೇಕ ಬಾಲಿವುಡ್ ಚಿತ್ರಗಳು ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತುಹೋದವು.