Samantha: ಸಮಂತಾ ಇಂಡಸ್ಟ್ರಿಗೆ ಬಂದು 13 ವರ್ಷ! ನಟಿಯ ಟಾಪ್ ಸಿನಿಮಾಗಳಿವು ಸಮಂತಾ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ತೆಲುಗಿನ ಸ್ಟಾರ್ ನಾಯಕಿಯರಲ್ಲಿ ಸಮಂತಾ ಕೂಡ ಒಬ್ಬರು. ಹಲವು ವರ್ಷಗಳಿಂದ ಸಮಂತಾ ತನ್ನ ಸಿನಿಮಾಗಳಿಗೆ ಪ್ರತ್ಯೇಕ ಮಾರ್ಕೆಟ್ ಸೃಷ್ಟಿಸಿಕೊಂಡಿದ್ದು ಮಾತ್ರವಲ್ಲದೆ ತನಗಾಗಿಯೇ ಪ್ರತ್ಯೇಕ ಅಭಿಮಾನಿ ಬಳಗವನ್ನೂ ಸೃಷ್ಟಿಸಿಕೊಂಡಿದ್ದಾರೆ. ಸಮಂತಾ ವೃತ್ತಿ ಜೀವನ ಆರಂಭಿಸಿ 13 ವರ್ಷಗಳು ಕಳೆದಿವೆ.
1 / 9
ನಟಿ ಸಮಂತಾ ತಮಿಳಿನಲ್ಲಿ ಎಷ್ಟು ಹಿಟ್ ಆಗಿ ಬೆಳೆದರೋ ಅದೇ ರೀತಿ ತೆಲುಗು ಚಿತ್ರರಂಗದಲ್ಲಿಯೂ ಮಿಂಚಿದರು. ನಟಿಯ ಸಿನಿಮಾ ಜರ್ನಿಗೆ 13 ವರ್ಷ ಆಗಿದೆ.
2 / 9
ಏ ಮಾಯ ಚೇಸಾವೆ ಸಿನಿಮಾದಲ್ಲಿ ಸಮಂತಾ ಜೊತೆ ನಟಿಸಿದ ನಾಗ ಚೈತನ್ಯ ಅವರ ಸಿನಿಮಾ ಹಿಟ್ ಆಯಿತು. ಈ ಮೂಲಕ ಇವರು ಜನರ ಮೆಚ್ಚಿನ ಆನ್ಸ್ಕ್ರೀನ್ ಜೋಡಿಯಾದರು.
3 / 9
ಜೂನಿಯರ್ ಎನ್ಟಿಆರ್ ಜೊತೆಗ ಕಾಜಲ್ ಅಗರ್ವಾಲ್ ಹಾಗೂ ಸಮಂತಾ ನಟಿಸಿದ ವೃಂದಾವನಂ ಸಿನಿಮಾ 100 ದಿನ ಓಡಿತು. ಇದರಲ್ಲಿ ಸಮಂತಾ ಮಾಡರ್ನ್ ಗರ್ಲ್ ಆಗಿ ಕಾಣಿಸಿಕೊಂಡಿದ್ದರು.
4 / 9
ಮಹೇಶ್ ಬಾಬು ಅವರ ಜೊತೆ ನಟಿಸಿದ ಸಮಂತಾ ಅವರ ಸಿನಿಮಾ ಭರ್ಜರಿ ಹಿಟ್ ಆಯಿತು. ಆಗಿನ್ನೂ ಸಮಂತಾ ತೆಲುಗು ಇಂಡಸ್ಟ್ರಿಯಲ್ಲಿ ಹೊಸ ಹೊಸ ಸಿನಿಮಾ ಮಾಡುತ್ತಿದ್ದರು.
5 / 9
ಸಮಂತಾ ತುಂಬಾ ಜನರಿಗೆ ಪರಿಚಯವಾಗಿದ್ದೇ ಈಗ ಸಿನಿಮಾ ಮೂಲಕ. ನಟ ಸುದೀಪ್ ವಿಲನ್ ಆಗಿ ನಟಿಸಿದ ಈ ಮೂವಿ ಸೂಪರ್ ಹಿಟ್ ಆಗಿದೆ.
6 / 9
ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಸಿನಿಮಾ ಮೂಲಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್ ಆದರು ಸಮಂತಾ. ಇದರಲ್ಲಿ ಮಹೇಶ್ ಬಾಬು ಜೊತೆ ನಟಿಸಿದ್ದಾರೆ.
7 / 9
ತೆಲುಗು ಇಂಡಸ್ಟ್ರಿಯ ಸೂಪರ್ ಹಿಟ್ ಸಿನಿಮಾ ಮನಂ. ಇದರಲ್ಲಿ ನಾಗ ಚೈತನ್ಯ ಹಾಗೂ ನಾಗಾರ್ಜುನ ಜೊತೆಗೇ ನಟಿಸಿದರು. ನಟಿ ಶ್ರಿಯಾ ಶರಣ್ ಕೂಡಾ ಅಭಿನಯಿಸಿದ್ದಾರೆ.
8 / 9
ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ಗೆ ಸಖತ್ ಮ್ಯಾಚಿಂಗ್ ಜೋಡಿಯಾಗಿದ್ದಾರೆ ನಟಿ ಸಮಂತಾ. ಅವರ ಈ ಸಿನಿಮಾ ಸಖತ್ ಕಾಮೆಡಿ ಮತ್ತು ಫ್ಯಾಮಿಲಿ ಡ್ರಾಮಾ ಆಗಿತ್ತು.
9 / 9
ತಮಿಳಿನ 24 ಸಿನಿಮಾ ಭರ್ಜರಿ ಯಶಸ್ಸು ಗಳಿಸಿತು. ಇದು ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ. ಟೈಂ ಟ್ರಾವೆಲ್ ಕಾನ್ಸೆಪ್ಟ್ ಸಿನಿಮಾದಲ್ಲಿ ಸೂರ್ಯ ಅವರಿಗೆ ಸಮಂತಾ ಜೋಡಿಯಾದರು.
First published: February 26, 2023, 12:58 IST