ಕಳೆದ ವರ್ಷ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ನಲ್ಲಿ ಮಾಧ್ಯಮ ಸಂವಾದದ ವೇಳೆ ಮಾತಾಡಿದ್ದ ಸಮಂತಾ, ಊ ಅಂಟವಾ ಹಾಡನ್ನು ಜನ ತಾನು ಸ್ವೀಕರಿಸಿದ ರೀತಿ, ತೋರಿದ ಪ್ರೀತಿಗೆ ಫಿದಾ ಆಗಿರೋದಾಗಿ ಹೇಳಿದ್ದರು. ಜನರು ನನ್ನ ಮೇಲೆ ತೋರುತ್ತಿರುವ ಪ್ರೀತಿಯನ್ನು ನಾನು ವಿವರಿಸಲಾರೆ. 'ಊ ಅಂಟವಾ' ಹಾಡಿ ಇಡೀ ದೇಶದಲ್ಲಿ ಈ ಮಟ್ಟಿಗೆ ಹಿಟ್ ಆಗುತ್ತೆ ಅಂತ ನಾನು ನಿರೀಕ್ಷಿಸಿರಲಿಲ್ಲ' ಎಂದು ಸಮಂತಾ ಹೇಳಿದ್ದರು.