Samantha: ಇದು ಟಾರ್ಚರ್ ಟೈಮ್ ಎಂದ ಸಮಂತಾ, ಏನಾಯ್ತು ಸ್ಯಾಮ್​ ಅಂತಿದ್ದಾರೆ ಫ್ಯಾನ್ಸ್

Samantha Ruth Prabhu: ನಟ ನಾಗ ಚೈತನ್ಯಗೆ ವಿಚ್ಛೇದನ ನೀಡಿದ ಬಳಿಕ ಸಮಂತಾ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ರಿಸಲ್ಟ್ ಲೆಕ್ಕಿಸದೆ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇತ್ತೀಚೆಗೆ ಸಮಂತಾ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

First published:

  • 18

    Samantha: ಇದು ಟಾರ್ಚರ್ ಟೈಮ್ ಎಂದ ಸಮಂತಾ, ಏನಾಯ್ತು ಸ್ಯಾಮ್​ ಅಂತಿದ್ದಾರೆ ಫ್ಯಾನ್ಸ್

    ಮೈಯೋಸಿಟಿಸ್ ಎಂಬ ಅಪರೂಪದ ಕಾಯಿಲೆಗೆ ಒಳಗಾಗಿ ಸಿನಿಮಾ ಕೆಲಸಕ್ಕೆ ಕೆಲ ಕಾಲ ಬ್ರೇಕ್ ತೆಗೆದುಕೊಂಡಿದ್ದ ನಾಯಕಿ ಸಮಂತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಶಾಕುಂತಲಂ ಸಿನಿಮಾ ಮುಗಿಸಿ ಪ್ರೇಕ್ಷಕರ ಮುಂದೆ ಬಂದಿದ್ದ ಸ್ಯಾಮ್ ಈಗ ತಮ್ಮ ಮುಂದಿನ ಪ್ರಾಜೆಕ್ಟ್‌ಗಳನ್ನು ಮುಗಿಸುತ್ತಿದ್ದಾರೆ.

    MORE
    GALLERIES

  • 28

    Samantha: ಇದು ಟಾರ್ಚರ್ ಟೈಮ್ ಎಂದ ಸಮಂತಾ, ಏನಾಯ್ತು ಸ್ಯಾಮ್​ ಅಂತಿದ್ದಾರೆ ಫ್ಯಾನ್ಸ್

    ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಸಿನಿಮಾಗಳತ್ತ ಗಮನ ಹರಿಸುತ್ತಿರುವ ಸಮಂತಾ ತಾವು ಮಾಡುತ್ತಿರುವ ಪ್ರತಿಯೊಂದು ಸಿನಿಮಾವನ್ನು ಸವಾಲಾಗಿ ತೆಗೆದುಕೊಳ್ಳುತ್ತಿದ್ದಾರೆ. ಅಪಾಯಕಾರಿ ಶಾಟ್‌ಗಳನ್ನು ಮಾಡುವುದು ಮತ್ತು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆಯಲು ನಾನಾ ಯತ್ನ ಮಾಡುತ್ತಿದ್ದಾರೆ.

    MORE
    GALLERIES

  • 38

    Samantha: ಇದು ಟಾರ್ಚರ್ ಟೈಮ್ ಎಂದ ಸಮಂತಾ, ಏನಾಯ್ತು ಸ್ಯಾಮ್​ ಅಂತಿದ್ದಾರೆ ಫ್ಯಾನ್ಸ್

    ರಾಜ್-ಡಿಕೆ ನಿರ್ದೇಶನದ ಸಿಟಾಡೆಲ್ ವೆಬ್ ಸರಣಿಯಲ್ಲಿ ಸಮಂತಾ ನಟಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದೆ. ಬಾಲಿವುಡ್ ನಲ್ಲಿ ತನ್ನದೇ ಛಾಪು ಮೂಡಿಸುವ ಹಠಕ್ಕೆ ಬಿದ್ದಿರುವ ಸ್ಯಾಮ್, ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ಧಾರೆ.

    MORE
    GALLERIES

  • 48

    Samantha: ಇದು ಟಾರ್ಚರ್ ಟೈಮ್ ಎಂದ ಸಮಂತಾ, ಏನಾಯ್ತು ಸ್ಯಾಮ್​ ಅಂತಿದ್ದಾರೆ ಫ್ಯಾನ್ಸ್

    ಇದೀಗ ಸಮಂತಾ ತೋರಿಸಲು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಶಾಕ್ ನೀಡಿದ್ದಾರೆ. ಇದು ಟಾರ್ಚರ್ ಸಮಯ ಎಂದು ಆಕೆ ಬರೆದುಕೊಂಡಿದ್ದಾರೆ. ಫೋಟೋ ಕೂಡ ವೈರಲ್ ಆಗುತ್ತಿದೆ. ಶೂಟಿಂಗ್ ಮುಗಿಸಿ ಐಸ್ ಬಾತ್ ಟಬ್‌ನಲ್ಲಿ ರಿಲ್ಯಾಕ್ಸ್ ಮಾಡುತ್ತಿರುವ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

    MORE
    GALLERIES

  • 58

    Samantha: ಇದು ಟಾರ್ಚರ್ ಟೈಮ್ ಎಂದ ಸಮಂತಾ, ಏನಾಯ್ತು ಸ್ಯಾಮ್​ ಅಂತಿದ್ದಾರೆ ಫ್ಯಾನ್ಸ್

    ಈ ಹಿಂದೆಯೂ ಸಮಂತಾ ಈ ರೀತಿಯ ಫೋಟೋವನ್ನು ಶೇರ್ ಮಾಡುವ ಮೂಲಕ ಎಲ್ಲರ ಕಣ್ಣು ತಮ್ಮ ಸಿಟಾಡೆಲ್ ಸಿನಿಮಾದ ಮೇಲೆ ಮೂಡಿಸಿದ್ದರು. ತನ್ನ ಗಾಯಗೊಂಡ ಕೈಗಳ ಫೋಟೋಗಳನ್ನು ತೋರಿಸಿದ್ರು. ವೆಬ್ ಸೀರಿಸ್‌ಗಾಗಿ ತಾನು ಏನೆಲ್ಲಾ ಕಷ್ಟ ಪಡುತ್ತಿದ್ದೇನೆ ಎಂದು ಹೇಳಿದ್ರು.

    MORE
    GALLERIES

  • 68

    Samantha: ಇದು ಟಾರ್ಚರ್ ಟೈಮ್ ಎಂದ ಸಮಂತಾ, ಏನಾಯ್ತು ಸ್ಯಾಮ್​ ಅಂತಿದ್ದಾರೆ ಫ್ಯಾನ್ಸ್

    ಸಮಂತಾ ಈ ಸಿಟಾಡೆಲ್ ಸೀರಿಸ್​ನಲ್ಲಿ ವರುಣ್ ಧವನ್ ಜೊತೆ ನಟಿಸುತ್ತಿದ್ದಾರೆ. ಇದೊಂದು ಆಕ್ಷನ್ ಸೀರಿಸ್ ಆಗಿರುವುದರಿಂದ ಸಮಂತಾ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಈ ಸಿನಿಮಾ ತಮ್ಮ ಸಿನಿಕೆರಿಯರ್​ನಲ್ಲಿ ಮೈಲಿಗಲ್ಲು ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ, ನಿರ್ಮಾಪಕರು ಕೂಡ ಈ ಸಿನಿಮಾಗಾಗಿ ಅನೇಕ ಪ್ಲಾನ್​ ಮಾಡಿದ್ದಾರಂತೆ.

    MORE
    GALLERIES

  • 78

    Samantha: ಇದು ಟಾರ್ಚರ್ ಟೈಮ್ ಎಂದ ಸಮಂತಾ, ಏನಾಯ್ತು ಸ್ಯಾಮ್​ ಅಂತಿದ್ದಾರೆ ಫ್ಯಾನ್ಸ್

    ಈ ಸಿಟಾಡೆಲ್ ಚಿತ್ರದ ಜೊತೆಗೆ ಸಮಂತಾ, ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾ ಮಾಡುತ್ತಿದ್ದಾರೆ. ಫೀಲ್ ಗುಡ್ ಲವ್ ಸ್ಟೋರಿಯಾಗಿ ತಯಾರಾಗುತ್ತಿರುವ ಈ ಚಿತ್ರವನ್ನು ಶಿವನಿರ್ವಾಣ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೇಲೆ ಸಮಂತಾ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    MORE
    GALLERIES

  • 88

    Samantha: ಇದು ಟಾರ್ಚರ್ ಟೈಮ್ ಎಂದ ಸಮಂತಾ, ಏನಾಯ್ತು ಸ್ಯಾಮ್​ ಅಂತಿದ್ದಾರೆ ಫ್ಯಾನ್ಸ್

    ಈ ಹಿಂದೆ ವಿಜಯ್ ದೇವರಕೊಂಡ ಮತ್ತು ಸಮಂತಾ ಮಹಾನಟಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈಗ ಅದೇ ಜೋಡಿ ಖುಷಿ ಸಿನಿಮಾದ ಮೂಲಕ ಮತ್ತೆ ಬರುತ್ತಿದ್ದು, ಇದೊಂದು ಫೀಲ್ ಗುಡ್ ಲವ್ ಸ್ಟೋರಿ ಕೂಡ ಆಗಿರುವುದರಿಂದ ತೆಲುಗು ಪ್ರೇಕ್ಷಕರಲ್ಲಿ  ಕ್ಯೂರಿಯಾಸಿಟಿ ಮೂಡಿದೆ.

    MORE
    GALLERIES