ಸಮಂತಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಒಬ್ಬ ವ್ಯಕ್ತಿಯ ವಿವರಗಳನ್ನು ಹಾಕಿದ್ದು, ನಾನು ಸೂಕ್ತವಾದ ಹೊಂದಾಣಿಕೆಯನ್ನು ಹುಡುಕುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಆ ವ್ಯಕ್ತಿಯೇ ಬಾಲಿವುಡ್ ಸೆಲೆಬ್ರಿಟಿ ಡಾ.ಜ್ಯುವೆಲ್ ಗಮಾಡಿಯಾ. ತನಗೆ ಸರಿಯಾದ ಜೋಡಿ ಬೇಕು ಎಂದಿದ್ದಾರೆ. ಡಾ. ಜ್ಯುವೆಲ್ ಫೋಟೋವನ್ನು ಶೇರ್ ಮಾಡಿರುವ ಸ್ಯಾಮ್, ಅವರು ಕಾಣುವುದಕ್ಕಿಂತ ಹೆಚ್ಚು ಬುದ್ಧಿವಂತರು ಎಂದು ಕಾಮೆಂಟ್ ಮಾಡಿದ್ದಾರೆ.